ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಉಜಿರೆ, ಅನುಮಾನಸ್ಪದ ರೀತಿಯಲ್ಲಿ ಬ್ಯಾಗ್ ಪತ್ತೆ: ಬೆಳ್ತಂಗಡಿ ಪೊಲೀಸರಿಂದ ಪರಿಶೀಲನೆ:

ಉಜಿರೆ, ಅನುಮಾನಸ್ಪದ ರೀತಿಯಲ್ಲಿ ಬ್ಯಾಗ್ ಪತ್ತೆ: ಬೆಳ್ತಂಗಡಿ ಪೊಲೀಸರಿಂದ ಪರಿಶೀಲನೆ:

 

 

 

ಬೆಳ್ತಂಗಡಿ: ಉಜಿರೆ ಸಮೀಪದ ಮನೆಯೊಂದರ ಹೊರಗಿನ ಜಗಲಿಯಲ್ಲಿ ಅನುಮಾನಸ್ಪದ ರೀತಿಯಲ್ಲಿ ಬ್ಯಾಗೊಂದು ಅ 12 ರಂದು  ಪತ್ತೆಯಾಗಿದೆ. ಉಜಿರೆಯ ಶಿವಾಜಿ ನಗರದ ಗುರುಪ್ರಸಾದ್ ಎಂಬವರ ಮನೆಯ ಹೊರ ಜಗಲಿಯಲ್ಲಿ ಬೆಳಿಗ್ಗೆ ಮನೆಯವರು ಎದ್ದು ನೋಡುವಾಗ ಬ್ಯಾಗೊಂದು ಕಂಡು ಬಂದಿದೆ.  ಮನೆಗೆ ಬರುವ ಕೆಲಸದವದ್ದಾಗಿರಬಹುದು ಎಂದು ಸಂಜೆಯವರೆಗೆ ಮನೆಯವರು  ಕಾದರೂ ಯಾರೂ ಬಾರದೇ ಇದ್ದಾಗ ನಂತರ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ.   ಸ್ಥಳಕ್ಕೆ ಬೆಳ್ತಂಗಡಿ ಪೊಲೀಸ್ ಠಾಣೆಯ ಎಎಸ್ಐ ದೇವಪ್ಪ ಸಿಬ್ಬಂದಿಗಳಾದ ಸುಂದರ್ ಶೆಟ್ಟಿ, ಬೆನ್ನಿಚ್ಚನ್ ಆಗಮಿಸಿ  ಬ್ಯಾಗ್ ಪರಿಶೀಲನೆ ಮಾಡಿದ್ದಾರೆ. ಬಟ್ಟೆ ಸೇರಿದಂತೆ ಕೆಲವೊಂದು ದಾಖಲೆಗಳು ಸಿಕ್ಕಿದ್ದು  ಮುಂದಿನ ಕ್ರಮಕ್ಕಾಗಿ  ಬ್ಯಾಗನ್ನು ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!