ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಉಜಿರೆ : ಶ್ರೇಯಸ್ ಉಪಧ್ಯಾಯ ಕಾಣೆ..!

ಉಜಿರೆ : ಶ್ರೇಯಸ್ ಉಪಧ್ಯಾಯ ಕಾಣೆ..!

ಬೆಳ್ತಂಗಡಿ : ಉಜಿರೆ ಪೇಟೆಗೆ ಹೋಗಿ ಬರುತ್ತೇನೆ ಎಂದು ಮನೆಯಿಂದ ಹೊರಟ ವ್ಯಕ್ತಿ ಬಳಿಕ ಕಾಣೆಯಾದ ಘಟನೆ ನಿಡ್ಲೆ ಗ್ರಾಮದಲ್ಲಿ ನಡೆದಿದೆ.

ಶ್ರೇಯಸ್ ಉಪಧ್ಯಾಯ (38) ಆ.4 ರಂದು ಬೆಳಗ್ಗೆ 11:45ರ ವೇಳೆಗೆ ನಿಡ್ಲೆ ಗ್ರಾಮದ ಮನೆಯಿಂದ ಉಜಿರೆ ಪೇಟೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋಗಿದ್ದು, ಆದರೆ ವಾಪಾಸ್ ಮನೆಗೆ ಬರಲಿಲ್ಲ. ಅಲ್ಲದೆ ಅವರ ಬಳಿ ಇದ್ದ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದು, ಮನೆಮಂದಿ ಹುಡುಕಾಟ ನಡೆಸಿ ನಂತರ ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದಾರೆ.

ಕಾಣೆಯಾದ ದಿನ ಶ್ರೇಯಸ್ ಉಪಧ್ಯಾಯ ಹಸಿರು ಬಣ್ಣದ ಟಿ.ಶರ್ಟ್, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದರು. ತುಳು, ಕನ್ನಡ ಇಂಗ್ಲಿಷ್ ಹಿಂದಿ ಮಾತನಾಡಬಲ್ಲರು. ಈ ವ್ಯಕ್ತಿ ಎಲ್ಲಿಯಾದರೂ ಪತ್ತೆಯಾದಲ್ಲಿ ಧರ್ಮಸ್ಥಳ ಠಾಣೆಗೆ ತಿಳಿಸುವಂತೆ ಪೊಲೀಸ್ ಪ್ರಕಟಣೆಯಲ್ಲಿ ಸೂಚಿಸಲಾಗಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!