ಕಲ್ಲೆ ನಿವಾಸಿ ಫೇಲಿಕ್ಸ್ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಮನೆಯ ಹಿಂಭಾಗದ ಮೂಲಕ ಒಳನುಗ್ಗಿದ ಕಳ್ಳರು ಮನೆಯಲ್ಲಿದ್ದ 15 ಪವನ್ ಚಿನ್ನ ಹಾಗೂ 20,000 ರೂ.ಹಣವನ್ನು ದೋಚಿದ್ದಾರೆ. ಮಧ್ಯಾಹ್ನ ಫೇಲಿಕ್ಸ್ ಮಗಳು ಕಾಲೇಜ್ ಮುಗಿಸಿ ಮನೆಗೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ.
ಘಟನಾ ಸ್ಥಳಕ್ಕೆ ಬೆಳ್ತಂಗಡಿ ಇನ್ಸ್ ಪೆಕ್ಟರ್ ನಾಗೇಶ್ ಕದ್ರಿ, ಸಬ್ ಇನ್ಸ್ ಪೆಕ್ಟರ್ ಧನ್‌ರಾಜ್ ಮತ್ತು ಸಿಬ್ಬಂದಿಗಳು ಭೇಟಿ ನೀಡಿದ್ದಾರೆ. ಹೆಚ್ಚಿನ ಪರಿಶೀಲನೆಗೆ ಮಂಗಳೂರಿನಿಂದ ಶ್ವಾನದಳ ಮತ್ತು ಎಫ್‌ಎಸ್‌ಎಲ್ ತಂಡ ಆಗಮಿಸಲಿದೆ.