ಸಮಾವೇಶದಲ್ಲಿ ಸೇರಿದ ಭಕ್ತವೃಂದ ಅಪಪ್ರಚಾರ ಮಾಡಿದವರ ವಿರುದ್ಧ ಧಿಕ್ಕಾರ ಕೂಗಿ, ವೀರೇಂದ್ರ ಹೆಗ್ಗಡೆಯವರ ಜೊತೆ ನಾವಿದ್ದೇವೆ ಎಂದು ಒಕ್ಕೊರಳಲ್ಲಿ ಹೇಳಿದರು.
ಬಳಿಕ ಶ್ರೀ ಜನಾರ್ಧನ ಸ್ವಾಮಿ ರಥಬೀದಿಯಿಂದ ಉಜಿರೆ ಕಾಲೇಜು ರಸ್ತೆಯವರೆಗೆ ಬೃಹತ್ ಸಮಾವೇಶ ಜಾಥ ನಡೆದು ಹಕ್ಕೊತ್ತಾಯ ಮಂಡಿಸಲಾಯಿತು. ಈ ಸಮಾವೇಶದಲ್ಲಿ ಮಂಜುನಾಥ ಸ್ವಾಮಿ ಭಕ್ತವೃಂದದ ಉಭಯ ಜಿಲ್ಲೆಗಳ ಸಾರ್ವಜನಿಕರು ಊರ-ಪರವೂರ ಭಕ್ತರು ಭಾಗವಹಿಸಿದ್ದರು.
‘ಜಸ್ಟಿಸ್ ಫಾರ್ ಸೌಜನ್ಯಾ’ ಪೋಸ್ಟರ್ ಹಿಡಿದು ಬಂದ ತಾಯಿ ಕುಸುಮಾವತಿಸಾವಿರಾರು ಮಂದಿಯಿಂದ ಹಕ್ಕೋತ್ತಾಯ ನಡೆಯುತ್ತಿದ್ದ ಸಂದರ್ಭದಲ್ಲಿ ಸೌಜನ್ಯ ತಾಯಿ ಆಗಮಿಸಿದ್ದು ಈ ವೇಳೆ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.
ತುಂಬಿದ ಸಭೆಯ ಮಧ್ಯೆ ‘ಜಸ್ಟಿಸ್ ಫಾರ್ ಸೌಜನ್ಯಾ ಪೊಸ್ಟರ್’ ಹಿಡಿದು ಬಂದ ಸೌಜನ್ಯ ತಾಯಿ ಕುಸುಮಾವತಿ ಗೌಡ ‘ನಾನೂ ವೇದಿಕೆಗೆ ಹೋಗಬೇಕು ಎಂದು’ ಆಗ್ರಹಿಸಿದ್ದಾರೆ. ‘ನನ್ನ ಮಗಳಿಗೆ ನ್ಯಾಯ ಕೊಡಿ, ನಾವೂ ಧರ್ಮಸ್ಥಳದವರು, ಈ ಪ್ರಕರಣದಲ್ಲಿ ಕ್ಷೇತ್ರದ ಅವಹೇಳನ ಮಾಡಿಲ್ಲ. ಹೆಗ್ಗಡೆಯವರ ಅವಹೇಳನ ಮಾಡಿಲ್ಲ. ಮುಂದೆ ಇಂತಹ ಅತ್ಯಾಚಾರ ಧರ್ಮಸ್ಥಳದಲ್ಲಿ ನಡೆಯಬಾರದು ಕ್ಷೇತ್ರದ ಹೆಸರು ಹಾಳಾಗಬಾರದು ಎಂಬ ಉದ್ದೇಶ ನಮಗೂ ಇದೆ. ಮಗಳನ್ನು ಕಳೆದುಕೊಂಡ ತಾಯಿ ನಾನು, ಈ ಸಭೆಯಲ್ಲಿ ನನ್ನ ನೋವನ್ನು ಹೇಳಿಕೊಳ್ಳಬೇಕು’ ಎಂದಿದ್ದಾರೆ,