ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಶಿಬರಾಜೆ ಪಾದೆ ಅಂಗನವಾಡಿಯಲ್ಲಿ ‘ಪೌಷ್ಠಿಕ ಆಹಾರ ಸಪ್ತಾಹ’ ಕಾರ್ಯಕ್ರಮ

ಶಿಬರಾಜೆ ಪಾದೆ ಅಂಗನವಾಡಿಯಲ್ಲಿ ‘ಪೌಷ್ಠಿಕ ಆಹಾರ ಸಪ್ತಾಹ’ ಕಾರ್ಯಕ್ರಮ

ಶಿಬರಾಜೆ ಪಾದೆ ಅಂಗನವಾಡಿಯಲ್ಲಿ ಸೆ.15ರಂದು ಪೋಷಣ್ ಮಾಸಾಚರಣೆ ಅಂಗವಾಗಿ ‘ಪೌಷ್ಠಿಕ ಆಹಾರ ಸಪ್ತಾಹ’ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಅಪೌಷ್ಠಿಕತೆ ಬಗ್ಗೆ , ಪೌಷ್ಠಿಕ ಆಹಾರಗಳ ವಿಧಗಳ ಬಗ್ಗೆ ಮತ್ತು ಅವುಗಳ ಸೇವನೆಯಲ್ಲಿ ಮಕ್ಕಳ ಮನವೊಲಿಸುವ ಪೋಷಕರ ಪಾತ್ರದ ಬಗ್ಗೆ ಸಿಎಚ್‍ಒ ನಿಖಿತಾ, ಕಿರಿಯ ಆರೋಗ್ಯ ಸಹಾಯಕಿ ರೇಖಾ ಮಾಹಿತಿ ನೀಡಿದರು.

ಬಳಿಕ ಮಕ್ಕಳ ಪೋಷಕರು ಮನೆಯಲ್ಲಿ ತಯಾರಿಸಿದ ಪೌಷ್ಠಿಕ ಆಹಾರವನ್ನು ಎಲ್ಲರೂ ಹಂಚಿಕೊಂಡು ಸವಿದರು.

ಕಾರ್ಯಕ್ರಮದಲ್ಲಿ ಕಳೆಂಜ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಶಾಲಾ ಬಾಲಸಮಿತಿಯ ಸದಸ್ಯ ಜೆ.ಎಸ್ ನಿತ್ಯಾನಂದ.ರೈ, ಆಶಾ ಕಾರ್ಯಕರ್ತೆ ಪುಷ್ಪಾ ಉಪಸ್ಥಿತರಿದ್ದರು.

ಅಂಗನವಾಡಿ ಕಾರ್ಯಕರ್ತೆ ಪ್ರಿಯಾ ಕಾರ್ಯಕ್ರಮ ನಿರೂಪಿಸಿದರು, ಶಾಲಾ ಸಹಾಯಕಿ ಅನ್ಸಿಲ್ಲಾ ರೋಶ್ನಿ ಹಾಗೂ ಸ್ತ್ರೀಶಕ್ತಿ ಸಂಘದ ಸದಸ್ಯರು ಸಹಕರಿಸಿದರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!