Home › ಬೆಳ್ತಂಗಡಿ: "ಪೋನ್ ಬೀ" ನೂತನ ಮೊಬೈಲ್ ಶಾಪ್ ಉದ್ಘಾಟನೆ: ವಿಶೇಷ ಆಫರ್..!
ಬೆಳ್ತಂಗಡಿ: "ಪೋನ್ ಬೀ" ನೂತನ ಮೊಬೈಲ್ ಶಾಪ್ ಉದ್ಘಾಟನೆ: ವಿಶೇಷ ಆಫರ್..!
ONLINE PUDU / Monday, September 18, 2023
ಬೆಳ್ತಂಗಡಿ: ನಗರದ ಮೂರು ಮಾರ್ಗದ ಬಳಿಯ ಅನುರಾಗ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತಿದ್ದ "ಫೋನ್ ಬೀ ಮೊಬೈಲ್ ಮಳಿಗೆಯು ಚರ್ಚ್ ರಸ್ತೆ ಬಳಿಯ ಬಸ್ ನಿಲ್ದಾಣದ ಹಿಂಭಾಗದ ಫ್ರಾಂಕೋ ಕಾಂಪ್ಲೆಕ್ಸ್ ಗೆ ಸ್ಥಳಾಂತರಗೊಂಡು ಸೆ.18 ಸೋಮವಾರ ಉದ್ಘಾಟನೆಗೊಂಡಿದೆ.
ಸುಂದರ ಆಚಾರ್ಯ ದಂಪತಿಗಳು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ವೇಳೆ ಹಿತೈಷಿಗಳು, ಸ್ಥಳೀಯರು ಉಪಸ್ಥಿತರಿದ್ದು ನೂತನ ಸಂಸ್ಥೆಗೆ ಶುಭ ಹಾರೈಸಿದರು. ಆಗಮಿಸಿದ ಗಣ್ಯರನ್ನು ಮಾಲಕ ದಂಪತಿಗಳಾದ ಗೋಪಾಲ್ ಹಾಗೂ ಪವಿತ್ರ ಸ್ವಾಗತಿಸಿ ಆತ್ಮೀಯವಾಗಿ ಬರಮಾಡಿಕೊಂಡು ಎಲ್ಲರ ಸಹಕಾರ ಕೋರಿದರು.
ನೂತನ ಸಂಸ್ಥೆಯಲ್ಲಿ ವಿಶೇಷ ಆಫರ್ ಗಳೊಂದಿಗೆ ಮೊಬೈಲ್‌ಗಳು ಗ್ರಾಹಕರಿಗೆ ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.