ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಬೆಳ್ತಂಗಡಿ : ಪತ್ರ ಬರೆದಿಟ್ಟು ಮನೆಯಿಂದ ನಾಪತ್ತೆಯಾದ ಕಾಲೇಜ್ ವಿದ್ಯಾರ್ಥಿ..!

ಬೆಳ್ತಂಗಡಿ : ಪತ್ರ ಬರೆದಿಟ್ಟು ಮನೆಯಿಂದ ನಾಪತ್ತೆಯಾದ ಕಾಲೇಜ್ ವಿದ್ಯಾರ್ಥಿ..!

ಬೆಳ್ತಂಗಡಿ : ಕಾಲೇಜ್ ವಿದ್ಯಾರ್ಥಿಯೋರ್ವ ಮನೆಯಲ್ಲಿ ಪತ್ರ ಬರೆದಿಟ್ಟು ಕಾಣೆಯಾದ ಘಟನೆ ಸೆ.04ರಂದು ಕಸಬಾ ಗ್ರಾಮದಲ್ಲಿ ನಡೆದಿದೆ.

ಗುರುದೇವ ಕಾಲೇಜು ಬಳಿ ವಾಸವಾಗಿರುವ ಶ್ರೀಮತಿ ಗೀತಾ ಎಂಬವರ ಮಗ ಪುನೀತ್ ಎಸ್.ಟಿ (21) ಎಂಬಾತ 3 ನೇ ವರ್ಷದ ಬಿ.ಎಸ್.ಸಿಯಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿದ್ದು ನಿನ್ನೆ ಬೆಳಗ್ಗೆ ಸಹೋದರಿ ಕಾಲೇಜ್‌ಗೆ ತೆರಳಿದ ಬಳಿಕ ಮನೆಯಲ್ಲಿ ಯಾರೂ ಇಲ್ಲದೆ ವೇಳೆ ಪತ್ರವೊಂದನ್ನು ಬರೆದಿಟ್ಟು ಮನೆಯಿಂದ ಕಾಣೆಯಾಗಿದ್ದಾನೆ. ತಾಯಿ ಸಕಲೇಶಪುರದಿಂದ ಮಧ್ಯಾಹ್ನ 3 ಗಂಟೆಗೆ ಬಂದು ಮನೆಯ ಬೀಗ ತೆಗೆದು ಒಳ ಹೋಗಿ ನೋಡಿದಾಗ ಮನೆಯ ಹಾಲ್‌ನಲ್ಲಿರುವ ಬೆಡ್ ಮೇಲೆ ಪತ್ರ ಸಿಕ್ಕಿದೆ. ನೆರೆ ಮನೆಯವರನ್ನು ವಿಚಾರಿಸಿದಾಗ 12:30ರ ವೇಳೆಗೆ ನೋಡಿದ್ದಾಗಿ ತಿಳಿಸಿದ್ದಾರೆ. ಆದರೆ ಕಾಣೆಯಾದ ಪುನೀತ್ ಎಸ್.ಟಿ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಈ ಕುರಿತು ಪುನೀತ್ ಎಸ್.ಟಿ ತಾಯಿ ಗೀತಾ ಅವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!