ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಮೂಡುಬಿದಿರೆ: ತುಳುನಾಡ ದೈವಾರಾಧನೆಯ ಪ್ರಾಚೀನತೆಯನ್ನು ಬಿಂಬಿಸುವ ಮಣ್ಣಿನ ಶಿಲ್ಪಗಳು ಪತ್ತೆ: ಬೃಹತ್ ಶಿಲಾಯುಗದ ಸಮಾಧಿಯ ಒಳಗೆ ಮಾತೃದೇವತೆಯ ಶಿಲ್ಪ..!

ಮೂಡುಬಿದಿರೆ: ತುಳುನಾಡ ದೈವಾರಾಧನೆಯ ಪ್ರಾಚೀನತೆಯನ್ನು ಬಿಂಬಿಸುವ ಮಣ್ಣಿನ ಶಿಲ್ಪಗಳು ಪತ್ತೆ: ಬೃಹತ್ ಶಿಲಾಯುಗದ ಸಮಾಧಿಯ ಒಳಗೆ ಮಾತೃದೇವತೆಯ ಶಿಲ್ಪ..!

ಮೂಡುಬಿದಿರೆ: ಬೃಹತ್ ಶಿಲಾಯುಗದ ನಿವೇಶನದಲ್ಲಿನ ಕಲ್ಮನೆ ಸಮಾಧಿಗಳ ಒಳಭಾಗದಲ್ಲಿ ಅತ್ಯಂತ ಅಪರೂಪದ ಸುಟ್ಟ ಆವಿಗೆ ಮಣ್ಣಿನ ಶಿಲ್ಪಗಳು ಪತ್ತೆಯಾಗಿವೆ.

ಮೂಡುಬಿದರೆ ಸಮೀಪ ಇರುವ ಮೂಡುಕೊಣಾಜೆಯ ಬಳಿ ಈ ವಸ್ತುಗಳು ಪತ್ತೆಯಾಗಿದ್ದು ಶಿರ್ವದ ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರು, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಪ್ರೊ. ಟಿ. ಮುರುಗೇಶಿ ಅವರು ಈ ಕುರಿತು ವಿಶೇಷ ಮಾಹಿತಿ ನೀಡಿದ್ದಾರೆ.

ಹರಪ್ಪ ನಾಗರೀಕತೆ ಅಥವಾ ತಾಮ್ರ ಶಿಲಾಯುಗ ಸಂಸ್ಕೃತಿಯ ನಂತರ, ಬೃಹತ್ ಶಿಲಾಯುಗದ ಪದರೀಕೃತ ಸನ್ನಿವೇಶದಲ್ಲಿ ದೊರೆತ ಈ ಶಿಲ್ಪಗಳು ಭಾರತೀಯ ಸಾಂಸ್ಕೃತಿಕ ಚರಿತ್ರೆಯ ಅಧ್ಯಯನದ ಮಹತ್ವಪೂರ್ಣ ಪ್ರಾಚ್ಯಾವಶೇಷಗಳಾಗಿವೆ. ಹಾಗೂ ತುಳುನಾಡಿನ ಮಾತೃಮೂಲೀಯ ಸಾಮಾಜಿಕ ವ್ಯವಸ್ಥೆಯ ಹಾಗೂ ದೈವಾರಾಧನೆಯ ಪ್ರಾಚೀನತೆಯ ಅತ್ಯಂತ ವಿಶ್ವಾಸಾರ್ಹ ದಾಖಲೆಗಳಾಗಿದೆ. ಇದೇ ಪ್ರಥಮ ಬಾರಿಗೆ ಕರ್ನಾಟಕದಲ್ಲಿ, ಬೃಹತ್ ಶಿಲಾಯುಗದ ಸಮಾಧಿಯ ಒಳಗೆ ಕೈಯಿಂದ ತಯಾರಿಸಿದ ಕಾಮಧೇನು ಅಥವಾ ಮಾತೃದೇವತೆಯ ಎರಡು ಶಿಲ್ಪಗಳು ಪತ್ತೆಯಾಗಿವೆ. ಮಾನವ ದೇಹ ಮತ್ತು ನಂದಿಯ ಮುಖವನ್ನು ಹೊಂದಿವೆ. ಅವುಗಳು ಸ್ತ್ರೀತ್ವದ ಸಂಕೇತವಾಗಿದೆ. ಈಜಿಪ್ಟ್ ನಲ್ಲಿ  ವ್ಯಾಪಕವಾಗಿ ಕಂಡು ಬಂದಿರುವ ಈ ಏಕೈಕ ಶಿಲ್ಪಗಳು ಈ ಮೊದಲು ಕೇರಳದ ಮಲಪ್ಪುರದ ಬೃಹತ್ ಶಿಲಾಯುಗದ ಕುಂಭ ಸಮಾಧಿಯಲ್ಲಿ ದೊರೆತಿದೆ. ಇದರ ಹೊರತು ಭಾರತದ ಯಾವುದೇ ನಿವೇಶನದಲ್ಲಿ ಇಂತಹ ಶಿಲ್ಪಗಳು ಪತ್ತೆಯಾಗಿಲ್ಲ. ಎಂದಿದ್ದಾರೆ.

ಈ ಶಿಲ್ಪಗಳ ಜೊತೆಯಲ್ಲಿ ಒಂದು ಮಾತೃದೇವತೆಯ ಶಿಲ್ಪ, ಎರಡು ನವಿಲಿನ ಶಿಲ್ಪಗಳು, ಒಂದು ಮಾತೃ ದೇವತೆಯ ಕೈಯ ಭಾಗ ಹಾಗೂ ಒಂದು ಕುದುರೆ ಮತ್ತು ಒಂದು ಖಚಿತವಾಗಿ ಗುರುತಿಸಲಾಗದ ವಸ್ತು ಕಂಡು ಬಂದಿದೆ. ಇವುಗಳ ಜೊತೆಯಲ್ಲಿ ಕಬ್ಬಿಣದ ತುಣುಕುಗಳು ಮತ್ತು ಎಲುಬಿನ ಚೂರುಗಳು ಪತ್ತೆಯಾಗಿವೆ. ಈ ಶಿಲ್ಪಗಳ ಕಾಲಮಾನವನ್ನು ಕನಿಷ್ಠ ಕ್ರಿಪೂ 800 ಅಥವಾ 700 ಎಂದು ನಿರ್ಧರಿಸಬಹುದಾಗಿದ್ದು, ಇದು ಇಲ್ಲಿನ ದೈವಾರಾಧನೆಯ ಪ್ರಾಚೀನತೆಗೂ ಸಾಕ್ಷಿಯಾಗಿದೆ ಎಂದಿದ್ದಾರೆ.

ಈ ಸಂಶೋಧನೆಯಲ್ಲಿ ಶ್ರೇಯಸ್ ಮಣಿಪಾಲ್, ಗೌತಮ್ ಬೆಳ್ಮಣ್, ಶ್ರೇಯಸ್ ಬಂಟಕಲ್, ರವೀಂದ್ರ ಕುಶ್ವಾ, ಕಾರ್ತೀಕ್, ಕು.ಅಕ್ಷತಾ ಮತ್ತು ಪ್ರಜ್ಞಾ ಭಾಗಿಯಾಗಿದ್ದರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!