ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಧರ್ಮಸ್ಥಳ - ನಾರಾವಿ ಬಸ್ ಸಂಚಾರಕ್ಕೆ ವಿದ್ಯುಕ್ತ ಚಾಲನೆ : ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್ ಉದ್ಘಾಟನೆ

ಧರ್ಮಸ್ಥಳ - ನಾರಾವಿ ಬಸ್ ಸಂಚಾರಕ್ಕೆ ವಿದ್ಯುಕ್ತ ಚಾಲನೆ : ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್ ಉದ್ಘಾಟನೆ

ಬೆಳ್ತಂಗಡಿ:  ನಾರಾವಿ - ಧರ್ಮಸ್ಥಳ ಸರಕಾರಿ ಬಸ್ ಸಂಚಾರಕ್ಕೆ ಸೆ.11ರಂದು ದಕ್ಷಿಣ ಕನ್ನಡ ಜಿಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಅಳದಂಗಡಿಯಲ್ಲಿ  ಚಾಲನೆ ನೀಡಿದರು. ಕಾರ್ಯಕ್ರಮ ಉದ್ಘಾಟಿಸಿ  ಮಾತನಾಡಿದ ಅವರು ಮಾಜಿ ಶಾಸಕ ವಸಂತ ಬಂಗೇರ, ರಕ್ಷಿತ್ ಶಿವರಾಂ ಹಾಗೂ ಇತರರು ಮಾಡಿದ ಮನವಿಯಂತೆ ಸಾರಿಗೆ ಸಚಿವರಲ್ಲಿ ಹಾಗೂ ಅಧಿಕಾರಿಗಳಲ್ಲಿ ಮಾತನಾಡಿ ನಾರಾವಿ ಧರ್ಮಸ್ಥಳ ಮಾರ್ಗದಲ್ಲಿ ಬಸ್ ಸಂಚಾರವನ್ನು ಪ್ರಾರಂಭಿಸಲಾಗಿದೆ. ಶಕ್ತಿಯೋಜನೆಯಡಿ ನಾರಾವಿ - ಧರ್ಮಸ್ಥಳದವರೆಗೆ ಸರಕಾರಿ ಬಸ್ ಸಂಚರಿಸಲಿದೆ. ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಸರಕಾರ ನೀಡಿದ ಆಶ್ವಾಸನೆಗಳನ್ನು ಈಡೇರಿಸಿ ನುಡಿದಂತೆ ನಡೆದಿದ್ದೇವೆ. ಅಭಿವೃದ್ಧಿಗೆ ಕೊನೆ ಇಲ್ಲ , ಮುಂದೆಯೂ ಅಭಿವೃದ್ಧಿ ಕಾರ್ಯಗಳು ನಡೆಯಲಿದೆ ಎಂದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿ, ಮಾಜಿ ಶಾಸಕ ವಸಂತ ಬಂಗೇರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ನಾಗೇಶ್ ಗೌಡ, ಸತೀಶ್ ಕಾಶಿಪಟ್ನ, ರಕ್ಷಿತ್ ಶಿವರಾಂ, ಶೇಖರ್ ಕುಕ್ಕೆಡಿ, ಧರಣೇಂದ್ರ ಕುಮಾರ್ ಸಾಹುಲ್ ಹಮೀದ್ , ಸಂಜೀವ ಪೂಜಾರಿ ಕೊಡಂಗೆ ಇತರರು ಉಪಸ್ಥಿತರಿದ್ದರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!