Home › ಅ.28 ಚಂದ್ರಗ್ರಹಣ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೇವರ ದರ್ಶನದ ಸಮಯ ಬದಲು: ಪ್ರಸಾದ ಭೋಜನ ವ್ಯವಸ್ಥೆ ಇಲ್ಲ..!
ಅ.28 ಚಂದ್ರಗ್ರಹಣ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೇವರ ದರ್ಶನದ ಸಮಯ ಬದಲು: ಪ್ರಸಾದ ಭೋಜನ ವ್ಯವಸ್ಥೆ ಇಲ್ಲ..!
ONLINE PUDU / Thursday, October 26, 2023
ಸುಬ್ರಹ್ಮಣ್ಯ : ಅ. 28ರ ಶನಿವಾರ ಚಂದ್ರಗ್ರಹಣ ಇರುವುದರಿಂದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೇವರ ದರ್ಶನದ ಸಮಯವನ್ನು ಬದಲಾವಣೆ ಮಾಡಲಾಗಿದ್ದು. ಈ ಕುರಿತು ಶ್ರೀ ಕ್ಷೇತ್ರದಿಂದ ಪ್ರಕಟಣೆ ಹೊರಡಿಸಲಾಗಿದೆ.
ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಳದ ಪ್ರಧಾನ ಅರ್ಚಕರ ನಿರ್ದೇಶನದಂತೆ ಅ.28ರಂದು ಮಹಾಪೂಜೆಯು ಸಾಯಂಕಾಲ ಗಂಟೆ 6.30ಕ್ಕೆ ಮುಕ್ತಾಯವಾಗಲಿದೆ. ಅಂದು ಸಾಯಂಕಾಲ ಆಶ್ಲೇಷ ಬಲಿ ಸೇವೆಯು ಇರುವುದಿಲ್ಲ. ಸಂಜೆ ಗಂಟೆ 6.30ರ ನಂತರ ಶ್ರೀ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಜೊತೆಗೆ ರಾತ್ರಿ ಪ್ರಸಾದ ಭೋಜನ ವ್ಯವಸ್ಥೆ ಇರುವುದಿಲ್ಲ ಎಂದು ತಿಳಿಸಲಾಗಿದೆ.
ರಾತ್ರಿ 1 ಗಂಟೆ 04 ನಿಮಿಷ ಗ್ರಹಣ ಸ್ಪರ್ಶ ಕಾಲವಾಗಿದ್ದು, ರಾತ್ರಿ 2 ಗಂಟೆ 24 ನಿಮಿಷ ಗ್ರಹಣ ಮೋಕ್ಷ ಕಾಲವಾಗಿರುತ್ತದೆ.