ಈ ಸಂದರ್ಭದಲ್ಲಿ ಮಾತನಾಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ದಿನ ನಿತ್ಯದ ಪೂಜೆ, ದೇವರ ಧ್ಯಾನ ಹಾಗೂ ಪ್ರಾರ್ಥನೆ ಸಮಯದಲ್ಲಿ ದೀಪ ಮತ್ತು ಧೂಪ ಬಳಸುವುದು ನಮ್ಮ ಸಂಪ್ರದಾಯವಾಗಿದೆ. ನೂತನ ಉತ್ಪನ್ನಗಳು ಎಲ್ಲರ ಮನೆ-ಮನಗಳನ್ನು ಬೆಳಗಲಿ ಎಂದು ಹಾರೈಸಿದರು.
ಸೈಕಲ್ ಬ್ರಾಂಡ್ ಅಗರ್ ಬತ್ತಿಯ ಸಿ.ಇ.ಒ. ಅರ್ಜುನ್‍ರಂಗ ಮತ್ತು ವಿಜಿರೋಮ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ವಿಜಯಲಕ್ಷ್ಮಿ ವಿಜಯಕುಮಾರ್ ಶುಭಾಶಂಸನೆ ಮಾಡಿದರು. ಸಿರಿ ಸಂಸ್ಥೆಗೆ ನಾಲ್ಕು ಸಂಚಾರಿ ವಾಹನಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಿ.ಒ.ಒ. ಅನಿಲ್ ಕುಮಾರ್ ಉಪಸ್ಥಿತರಿದ್ದರು.
ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ. ಎನ್. ಜನಾರ್ದನ್ ಸ್ವಾಗತಿಸಿ, ಆಡಳಿತ ನಿರ್ದೇಶಕ ಪ್ರಸನ್ನ ಯು. ಧನ್ಯವಾದವಿತ್ತರು. ಜೀವನ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.