ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಲಾಯಿಲ: ಪಿಕಪ್ ವಾಹನ ಡಿಕ್ಕಿ: ಬಾಲಕ ಸಾವು..!

ಲಾಯಿಲ: ಪಿಕಪ್ ವಾಹನ ಡಿಕ್ಕಿ: ಬಾಲಕ ಸಾವು..!

ಬೆಳ್ತಂಗಡಿ: ರಸ್ತೆ ದಾಟುತ್ತಿರುವ ವೇಳೆ ಪಿಕಪ್ ವಾಹನವೊಂದು ಡಿಕ್ಕಿ ಹೊಡೆದು ಬಾಲಕನೊಬ್ಬ ಗಂಭೀರ ಗಾಯಗೊಂಡು ಸಾವನ್ನಪ್ಪಿದ ಘಟನೆ ಅ.18ರಂದು ಲಾಯಿಲದಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಪಾರೆಂಕಿ ಗ್ರಾಮದ ಅರ್ತಿಲಾ ಮನೆಯ ಮಹಮ್ಮದ್ ರಫೀಕ್ ಅವರ ಮಗ ಮಹಮ್ಮದ್ ರಂಝಿನ್(10) ಶಾಲಾ ರಜೆಯ ಹಿನ್ನಲೆ ಸಂಬಂಧಿಕರ ಮನೆಗೆ ಬಂದಿದ್ದು, ಇಂದು 11:50ರ ಸುಮಾರಿಗೆ ಅಂಗಡಿಗೆ ಹೋಗಿ ವಾಪಾಸ್ ರಸ್ತೆ ದಾಟುವಾಗ ಲಾಯಿಲ ಜಂಕ್ಷನ್ ಬಳಿ ಉಜಿರೆಯಿಂದ ಬಂದ ಪಿಕಪ್ ಡಿಕ್ಕಿ ಹೊಡೆದಿದೆ. ಪರಿಣಾಮ ಬಾಲಕ ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದಾನೆ.

ತಕ್ಷಣ ಸ್ಥಳೀಯರ ಸಹಕಾರದಲ್ಲಿ ಬಾಲಕನನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಎಜೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಮಾರ್ಗ ಮಧ್ಯೆ ಬಾಲಕ ಕೊನೆಯುಸಿರೆಳೆದಿದ್ದಾನೆ.

ಪಿಕಪ್ ವಾಹನ ಚಾಲಕ ವೇಣೂರಿನ ನಿವಾಸಿ ಜಯ ವಿರುದ್ಧ ಬೆಳ್ತಂಗಡಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!