ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಆರಿಸ್ ಗ್ರೂಪ್ ಇಂಡಿಯಾ ವತಿಯಿಂದ ದಯಾ ವಿಶೇಷ ಶಾಲೆಗೆ ಸ್ಮಾರ್ಟ್ ಬೋರ್ಡ್ ಕೊಡುಗೆ

ಆರಿಸ್ ಗ್ರೂಪ್ ಇಂಡಿಯಾ ವತಿಯಿಂದ ದಯಾ ವಿಶೇಷ ಶಾಲೆಗೆ ಸ್ಮಾರ್ಟ್ ಬೋರ್ಡ್ ಕೊಡುಗೆ

ಬೆಳ್ತಂಗಡಿ: ಆರಿಸ್ ಗ್ರೂಪ್ ಇಂಡಿಯಾ ವತಿಯಿಂದ ದಯಾ ವಿಶೇಷ ಶಾಲೆಗೆ ಸ್ಮಾರ್ಟ್ ಬೋರ್ಡ್ ಹಸ್ತಾಂತರಿಸಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಆರಿಸ್ ಗ್ರೂಪ್ ಇಂಡಿಯಾ ಮುಖ್ಯಸ್ಥ ನವೀನ್ ಕಪುಚಿನ್ ಕೃಷಿಕ್ ಸೇವಾ ಕೇಂದ್ರದ ಸೇವಾ ಮನೋಭಾವವನ್ನು ಮುಕ್ತಕಂಠದಿಂದ ಹೊಗಳಿದರು. ದಯಾ ವಿಶೇಷ ಶಾಲೆಯ ಮಕ್ಕಳು ಸಮಾಜದಲ್ಲಿ ಮುಂದೆ ಬರುವ ಹಾಗೆ ನೋಡಿಕೊಳ್ಳುತ್ತಾ ಬಂದಿದ್ದಾರೆ ಎಂದು ಸಂಸ್ಥೆಯನ್ನು ಶ್ಲಾಘಿಸಿದರು.

ಸಂಸ್ಥೆಯ ನಿರ್ದೇಶಕರು ಮಾತನಾಡಿ, ದಯಾ ವಿಶೇಷ ಶಾಲೆಯ ಮಕ್ಕಳಲ್ಲಿ ಬೇರೆ-ಬೇರೆ ರೀತಿಯಲ್ಲಿ ದಿವ್ಯಾಂಗ-ಚೈತನ್ಯವುಳ್ಳವರಾಗಿರುವುದರಿಂದ  ವಿವಿಧ ಸೌಲಭ್ಯವನ್ನು ಪಡೆಯಲು ಅಶಕ್ತರಾಗಿದ್ದಾರೆ. ಅದಕ್ಕೋಸ್ಕರ ಕಪುಚಿನ್ ಕೃಷಿಕ್ ಸೇವಾ ಕೇಂದ್ರ ಸಂಸ್ಥೆ ಹಲವಾರು ರೀತಿಯಲ್ಲಿ ಪ್ರತಿಯೊಂದು ಮಗುವಿಗೆ ಸೌಲಭ್ಯಗಳು ಸಿಗುವಲ್ಲಿ ಸತತ ಪ್ರಯತ್ನಮಾಡುತ್ತಾ ಬಂದಿದೆ. ಆರಿಸ್ ಗ್ರೂಪ್ ಇಂಡಿಯಾ ನಮ್ಮ ಸಂಸ್ಥೆಯೊಂದಿಗೆ ಕೈಜೋಡಿಸಿ ಮಕ್ಕಳನ್ನು ಮುಖ್ಯ ವಾಹಿನಿಗೆ ತರಲು ಈ ಬಾರಿ ಸ್ಮಾರ್ಟ್ ಬೋರ್ಡ್ ಅಲ್ಲದೇ ಜನ್ ಸೇಟ್ ಸಹ ಕೊಡಲು ಮುಂದೆ ಬಂದಿದ್ದಾರೆ. ನಾವು ಅವರ ಉಪಕಾರವನ್ನು ಸ್ಮರಿಸುತ್ತೆವೆ. ಈ ಮಕ್ಕಳ ಬಾಳು ಇನ್ನೂ ಕೂಡ ಸುಂದರವಾಗಲಿ ಎಂದು ಹಾರೈಸುತ್ತೇನೆ ಎಂದರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!