ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ‘ಮೈ ಲಾರ್ಡ್' ಪದ ಬಳಕೆ ಬಗ್ಗೆ ಸುಪ್ರೀಂ ಕೋರ್ಟ್ ಅಸಮಾಧಾನ: ಗುಲಾಮಗಿರಿಯ ಸಂಕೇತವೆಂದ ಸರ್ವೋಚ್ಚ ನ್ಯಾಯಾಲಯ..!

‘ಮೈ ಲಾರ್ಡ್' ಪದ ಬಳಕೆ ಬಗ್ಗೆ ಸುಪ್ರೀಂ ಕೋರ್ಟ್ ಅಸಮಾಧಾನ: ಗುಲಾಮಗಿರಿಯ ಸಂಕೇತವೆಂದ ಸರ್ವೋಚ್ಚ ನ್ಯಾಯಾಲಯ..!

 

ನವದೆಹಲಿ: ನ್ಯಾಯಾಲಯದಲ್ಲಿ ವಕೀಲರು ಪ್ರಕರಣಗಳ ಕುರಿತಂತೆ ವಾದ ಮಂಡಿಸುವಾಗ ‘ಮೈ ಲಾರ್ಡ್' ಮತ್ತು ‘ಯುವರ್ ಲಾರ್ಡ್‍ಶಿಪ್' ಎಂದು ಹೇಳುವುದು ಭಾರತದ ನ್ಯಾಯಾಂಗ ಪ್ರಕೃಯೆ. ಆದರೆ ಇದಕ್ಕೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅ.02ರಂದು ಪ್ರಕರಣವೊಂದರ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‍ನಲ್ಲಿ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರೊಂದಿಗೆ ಪೀಠದಲ್ಲಿದ್ದ ನ್ಯಾ.ಪಿ.ಎಸ್.ನರಸಿಂಹ ಅವರು ಹಿರಿಯ ವಕೀಲರೊಬ್ಬರಿಗೆ ‘ಮೈ ಲಾಡ್ರ್ಸ್’ ಎಂದು ಎಷ್ಟು ಬಾರಿ ಹೇಳುತ್ತೀರಿ? ಹೀಗೆ ಹೇಳುವುದನ್ನು ನಿಲ್ಲಿಸಿದರೆ ನನ್ನ ಸಂಬಳದಲ್ಲಿ ಅರ್ಧದಷ್ಟು ನಿಮಗೆ ಕೊಡುತ್ತೇನೆ. ಇಲ್ಲದಿದ್ದರೆ ಹಿರಿಯ ವಕೀಲರು ‘ಮೈ ಲಾಡ್ರ್ಸ್’ ಎಂಬ ಪದವನ್ನು ಎಷ್ಟು ಬಾರಿ ಉಚ್ಚರಿಸಿದ್ದಾರೆ ಎಂದು ಲೆಕ್ಕ ಹಾಕಬೇಕಾಗುತ್ತದೆ" ಎಂದರು.

ನ್ಯಾಯಾಲಯದಲ್ಲಿ ಯಾವುದೇ ಪ್ರಕರಣದ ವಿಚಾರಣೆ ಅಥವಾ ಚರ್ಚೆಯ ಸಮಯದಲ್ಲಿ ವಕೀಲರು, ನ್ಯಾಯಾಧೀಶರನ್ನು 'ಮೈ ಲಾರ್ಡ್' ಅಥವಾ 'ಯುವರ್ ಲಾರ್ಡ್‍ಶಿಪ್' ಎಂದು ಕರೆಯುವುದನ್ನು ರೂಢಿ ಮಾಡಿಕೊಂಡಿದ್ದಾರೆ. É "ಸರ್ ಎಂದು ಏಕೆ ಬಳಸಬಾರದು?, ಈ ಪದ್ಧತಿಯನ್ನು ವಿರೋಧಿಸುವವರು ಇದನ್ನು ವಸಾಹತುಶಾಹಿ ಯುಗದ ಅವಶೇಷ ಮತ್ತು ಗುಲಾಮಗಿರಿಯ ಸಂಕೇತವೆಂದು ಕರೆಯುತ್ತಾರೆ. 2006ರಲ್ಲಿ ಬಾರ್ ಕೌನ್ಸಿಲ್ ಆಫ್ ಇಂಡಿಯಾ ನಿರ್ಣಯವೊಂದನ್ನು ಅಂಗೀಕರಿಸಿತ್ತು. ಈ ನಿರ್ಣಯದ ಪ್ರಕಾರ, ಯಾವುದೇ ವಕೀಲರು ನ್ಯಾಯಾಧೀಶರನ್ನು ‘ಮೈ ಲಾರ್ಡ್' ಮತ್ತು ‘ಯುವರ್ ಲಾರ್ಡ್‍ಶಿಪ್' ಎಂದು ಕರೆಯಬಾರದು ಎಂದಿದೆ. ಆದರೆ ಇದನ್ನು ವಕೀಲರು ಅನುಸರಿಸುತ್ತಿಲ್ಲ. ಹೀಗಾಗಿ ಪದ್ಧತಿ ಜಾರಿಯಲ್ಲಿದೆ ಎಂದರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!