ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಬಳಂಜ:ನಾಲ್ಕೂರು ಪರಿಸರದಲ್ಲಿ ಚಿರತೆ ಹೆಜ್ಜೆ ಗುರುತು ಪತ್ತೆ: ಚಿರತೆ ಸೆರೆಗೆ ಅರಣ್ಯ ಇಲಾಖೆಯಿಂದ ಬೋನ್ ಅಳವಡಿಕೆ

ಬಳಂಜ:ನಾಲ್ಕೂರು ಪರಿಸರದಲ್ಲಿ ಚಿರತೆ ಹೆಜ್ಜೆ ಗುರುತು ಪತ್ತೆ: ಚಿರತೆ ಸೆರೆಗೆ ಅರಣ್ಯ ಇಲಾಖೆಯಿಂದ ಬೋನ್ ಅಳವಡಿಕೆ

 

 

ಬೆಳ್ತಂಗಡಿ: ನಾಲ್ಕೂರು ಗ್ರಾಮದ ಬೊಳ್ಳಾಜೆ,ಪುಣ್ಕೆದೊಟ್ಟು ಪರಿಸರದಲ್ಲಿ ಕಳೆದ ಕೆಲ ಸಮಯಗಳಿಂದ ಚಿರತೆ ಹೆಜ್ಜೆ ಗುರುತು ಕಂಡು ಬಂದಿದ್ದು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು ಚಿರತೆಯ ಸೆರೆಗಾಗಿ ಬೋನ್ ಅಳವಡಿಸಲಾಗಿದೆ.

ಕೆಲವು ಸಮಯದಿಂದ ಬಳಂಜದಲ್ಲಿ ಚಿರತೆ ಕಾಣ ಸಿಕ್ಕಿದ್ದು ಚಿರತೆಯ ಸೆರೆಗಾಗಿ ಹಲವಾರು ಬಾರಿ ಬೋನ್ ಅಳವಡಿಸಲಾಗಿತ್ತು. ಆದರೆ ಬೋನ್ ಗೆ ಚಿರತೆ ಬೀಳಲಿಲ್ಲ.ಇತ್ತಿಚೆಗೆ ನಾಲ್ಕೂರು ಗ್ರಾಮದ ಬೊಳ್ಳಾಜೆ ಪುಣ್ಕೆದೊಟ್ಟು ಪರಿಸರದಲ್ಲಿ ಚಿರತೆ ಓಡಾಟ ಮಾಡಿದ ಹೆಜ್ಜೆ ಗುರುತು ಪತ್ತೆಯಾಗಿದೆ. ಅದಲ್ಲದೇ ತಿಂಗಳ ಹಿಂದೆ ಈ ಭಾಗದಲ್ಲಿ ಹಲವಾರು ನಾಯಿಗಳು ಕಾಣೆಯಾಗಿದ್ದವು, ಈ ಬಗ್ಗೆ ಅಳದಂಗಡಿ ಉಪ ವಲಯಾರಣ್ಯಧಿಕಾರಿ ಸುರೇಶ್ ಗೌಡರಿಗೆ ಮಾಹಿತಿ ನೀಡಿದಾಗ ತಕ್ಷಣ ಸ್ಪಂದಿಸಿ ಪುಣ್ಕೆದೊಟ್ಟು ಪರಿಸರದಲ್ಲಿ ಬೋನ್ ಅಳವಡಿಸಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!