ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಉಜಿರೆ, ರಸ್ತೆಗೆ ಉರುಳಿಬಿದ್ದ ವಿದ್ಯುತ್ ಟವರ್ : ಕಾರು ಬೈಕ್ ಗಳಿಗೆ ಹಾನಿ:ಅದೃಷ್ಟವಶಾತ್ ತಪ್ಪಿದ ಭಾರೀ ಅನಾಹುತ:

ಉಜಿರೆ, ರಸ್ತೆಗೆ ಉರುಳಿಬಿದ್ದ ವಿದ್ಯುತ್ ಟವರ್ : ಕಾರು ಬೈಕ್ ಗಳಿಗೆ ಹಾನಿ:ಅದೃಷ್ಟವಶಾತ್ ತಪ್ಪಿದ ಭಾರೀ ಅನಾಹುತ:

 

 

 

 

 

 

ಬೆಳ್ತಂಗಡಿ: ತಾಲೂಕಿನಾದ್ಯಂತ ಇಂದು ಸಂಜೆ ಭಾರೀ ಮಳೆಯಾಗಿದ್ದು ಉಜಿರೆ ಗ್ರಾಮದ ಬೆಳಾಲು ರಸ್ತೆಯ  ನಿನ್ನಿಕಲ್ಲು ಸಮೀಪ  ಧರ್ಮಸ್ಥಳಕ್ಕೆ ಹಾದು ಹೋಗಿರುವ ವಿದ್ಯುತ್ ತಂತಿಯ ಟವರ್ ರಸ್ತೆಗೆ ಉರುಳಿ ಬಿದ್ದ ಪರಿಣಾಮ ರಸ್ತೆ ಬದಿ ನಿಲ್ಲಿಸಿದ ಕಾರು ಹಾಗೂ ಬೈಕ್ ಗಳಿಗೆ ಹಾನಿಯಾಗಿದ್ದಲ್ಲದೆ ಒಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ ಟವರ್  ರಸ್ತೆಗೆ  ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ತೊಂದರೆಯುಂಟಾಗಿದೆ. ಅದಲ್ಲದೇ ಧರ್ಮಸ್ಥಳ ಹಾಗೂ ಇತರ ಕಡೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಮೆಸ್ಕಾಂ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳೀಯರ ಸಹಕಾರದಲ್ಲಿ ಟವರ್ ತೆರವುಗೊಳಿಸಿ ದುರಸ್ತಿ ಕೆಲಸ ಮಾಡುತಿದ್ದಾರೆ. ರಸ್ತೆ ದುರಸ್ತಿಗೊಳಿಸುವ ವೇಳೆ ಮಣ್ಣು ತೆಗೆದ ಪರಿಣಾಮದಿಂದ ಟವರ್ ಉರುಳಿ ಬೀಳಲು ಕಾರಣ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!