ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ದಯಾ ಶಾಲೆಯಲ್ಲಿ ಮಕ್ಕಳ ಕಲರವ: ದೀಪಾವಳಿ ಹಾಗೂ ಮಕ್ಕಳ ದಿನ ಆಚರಣೆ

ದಯಾ ಶಾಲೆಯಲ್ಲಿ ಮಕ್ಕಳ ಕಲರವ: ದೀಪಾವಳಿ ಹಾಗೂ ಮಕ್ಕಳ ದಿನ ಆಚರಣೆ

ಬೆಳ್ತಂಗಡಿ: ದಯಾ ವಿಶೇಷ ಶಾಲೆಯಲ್ಲಿ ಹೋಲಿ ಕ್ರಾಸ್ ಚರ್ಚ್ ಮಂಜೊಟ್ಟಿ ವತಿಯಿಂದ ನ.19ರಂದು ಮಕ್ಕಳ ದಿನ ಮತ್ತು ದೀಪಾವಳಿ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಂಜೊಟ್ಟಿ ಹೋಲಿ ಕ್ರಾಸ್ ಚರ್ಚ್ ನ ಧರ್ಮಗುರುಗಳಾದ ವಂ. ಫಾ. ಪ್ರಾವೀಣ್ ಡಿʼಸೋಜಾ ರವರು ಮಾತನಾಡಿ ಎಲ್ಲಾರಿಗೂ ‘ಮಕ್ಕಳ ದಿನʼ ಮತ್ತು ‘ದೀಪಾವಳಿʼ ಯ ಶುಭಾಶಯ, ದೇವರು ಎಲ್ಲಾರಿಗೂ ಆಯುಷ್ಯ-ಆರೋಗ್ಯವನ್ನು ಕೊಡಲಿ, ಎಲ್ಲಾರ ಬಾಳಿನಲ್ಲಿ ಬೆಳಕು ಸದಾ ಇರಲಿ, ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಮಂಜೊಟ್ಟಿ ಹೋಲಿ ಕ್ರಾಸ್  ಚರ್ಚ್ ನ ಎಲ್ಲಾ ಮಕ್ಕಳು ಭಾಗಿಯಾಗಿ ದಯಾ ವಿಶೇಷ ಶಾಲೆಯ ಮಕ್ಕಳೊಂದಿಗೆ ಬೆರೆತು ತಮ್ಮ ಅಮೂಲ್ಯವಾದ ಸಮಯವನ್ನು ಕಳೆದರು. ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ, ಬಹುಮಾನ ವಿತರಿಸಿ, ಊಟೋಪಚಾರದಲ್ಲಿ ಜೊತೆಯಾಗಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ದಯಾ ವಿಶೇಷ ಶಾಲೆಯ ಸಂಚಾಲಕರು ಮತ್ತು ವಿರ್ದೇಶಕರು ಆದ ವಂ. ಫಾ. ವಿನೋದ್ ಮಸ್ಕರೇನ್ಹಸ್, ವಂ. ಫಾ. ಪ್ರವೀಣ್ ಡಿʼಸೋಜಾ ಹೋಲಿ ಕ್ರಾಸ್ ಚರ್ಚ್ ಮಂಜೋಟ್ಟಿ, ಕಾರ್ಯದರ್ಶೀ ಐರಿನ್ ಸಿಕ್ಟೇರಾ ಕ್ಯಾಟಿಕಿಸಂ, ಕೋ-ಆರ್ಡಿನೇಟರ್ ಜಾಕಿನ್ ಬನ್ ಸೆರಾವೊ ಮತ್ತುICYM ಅಧ್ಯಕ್ಷ ಕ್ಲಾರೆನ್ ಮಿರಾಂಡಾ ಹಾಗೂ ಕಾರ್ಯದರ್ಶಿ ಸೀಮಾ ಲೋಬೋರವರು ಜೊತೆಗಿದ್ದರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!