ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಮಂಗಗಳ ದಾಳಿಗೆ 6 ವರ್ಷದ ಬಾಲಕಿ ಸಾವು..!: ಮಹಿಳೆಯನ್ನೂ ಬಿಡದೆ ಅಟ್ಟಿಸಿದ ಕೋತಿಗಳ ಗುಂಪು: ಮೂರು ದಿನದಲ್ಲಿ ಎರಡನೇ ಪ್ರಕರಣ..!

ಮಂಗಗಳ ದಾಳಿಗೆ 6 ವರ್ಷದ ಬಾಲಕಿ ಸಾವು..!: ಮಹಿಳೆಯನ್ನೂ ಬಿಡದೆ ಅಟ್ಟಿಸಿದ ಕೋತಿಗಳ ಗುಂಪು: ಮೂರು ದಿನದಲ್ಲಿ ಎರಡನೇ ಪ್ರಕರಣ..!

ಸಾಂದರ್ಭೀಕ ಚಿತ್ರ

ಬರೇಲಿ: ಮನೆಯ ಟೆರೇಸ್ ಮೇಲೆ ಅಜ್ಜನೊಂದಿಗೆ ಆಡುತ್ತಾ ಕುಳಿತಿದ್ದ 6ವರ್ಷದ ಬಾಲಕಿಯನ್ನು ಮಂಗಗಳ ಗುಂಪು ಅಟ್ಟಿಸಿಕೊಂಡು ಬಂದಾಗ ಬಾಲಕಿ ತಪ್ಪಿಸಿಕೊಳ್ಳುವ ಭರದಲ್ಲಿ ಟೆರೇಸ್ ನಿಂದ ಬಿದ್ದು ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಸಿರ್ಸಿ ಪಟ್ಟಣದಲ್ಲಿ ನಡೆದಿದೆ.

ಎರಡನೇ ತರಗತಿ ವಿದ್ಯಾರ್ಥಿನಿ ಕೃತಿ ತನ್ನ ಅಜ್ಜನೊಂದಿಗೆ ಆಡುತ್ತಿದ್ದ ವೇಳೆ ಈ ಘಟನೆ ಸಂಭವಿಸಿದ್ದು ಬಾಲಕಿ ಮೆಟ್ಟಲಿನ ಬಳಿಗೆ ಓಡಿಬಂದಾಗ ಕಾಲು ಜಾರಿ ಛಾವಣಿಯಿಂದ ಬಿದ್ದಿದ್ದಾಳೆ. ತೀವ್ರ ಗಾಯಗೊಂಡ ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಉಸಿರು ಚೆಲ್ಲಿದ್ದಾಳೆ.

ಎರಡು ದಿನಗಳ ಹಿಂದಷ್ಟೇ ಮನೆಯ ಟೆರೇಸ್ ನಲ್ಲಿ ಆಹಾರ ಸೇವಿಸುತ್ತಿದ್ದ ಸೋಮತಿದೇವಿ (40) ಮಂಗಗಳ ದಾಳಿಗೊಳಗಾಗಿ ಛಾವಣಿಯಿಂದ ಬಿದ್ದು ಮೃತಪಟ್ಟಿದ್ದರು.

ಮಂಗಗಳು ಹಾಗೂ ಬೀದಿನಾಯಿಗಳ ಕಾಟದಿಂದ ಈ ಪ್ರದೇಶದ ಎಲ್ಲರೂ ತೊಂದರೆ ಅನುಭವಿಸುತ್ತಿದ್ದು, ಇದರ ನಿಯಂತ್ರಣಕ್ಕೆ ಆಡಳಿತ ವರ್ಗ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅವರು ಸಾರ್ವಜನಿಕರು ಆರೋಪಿಸಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!