ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಕೋಣವನ್ನೇರಿದ ಸ್ಯಾಂಡಲ್‌ವುಡ್ ಡೈನಾಮಿಕ್ ಪ್ರಿನ್ಸ್: ಪ್ರೋಮೊದಲ್ಲಿ ಧ್ವನಿಸಿದ ‘ಮಗನೇ ಮಹಿಷ’ ಡೈಲಾಗ್: ಕುತೂಹಲ ಹೆಚ್ಚಿಸುತ್ತಿದೆ ‘ಕರಾವಳಿ’ ಕನ್ನಡ ಚಿತ್ರ

ಕೋಣವನ್ನೇರಿದ ಸ್ಯಾಂಡಲ್‌ವುಡ್ ಡೈನಾಮಿಕ್ ಪ್ರಿನ್ಸ್: ಪ್ರೋಮೊದಲ್ಲಿ ಧ್ವನಿಸಿದ ‘ಮಗನೇ ಮಹಿಷ’ ಡೈಲಾಗ್: ಕುತೂಹಲ ಹೆಚ್ಚಿಸುತ್ತಿದೆ ‘ಕರಾವಳಿ’ ಕನ್ನಡ ಚಿತ್ರ

ಕಾಂತಾರದಲ್ಲಿ ಡಿವೈನ್ ಸ್ಟಾರ್ ಕೋಣ ಓಡಿಸಿದ ರೀತಿ ನೋಡಿ ದೇಶವೇ ನಿಬ್ಬೆರಗಾಗಿದೆ. ಬೆಂಗಳೂರಿನಲ್ಲಿ ಕಂಬಳ ನಡೆದು ಕರಾವಳಿಯ ಸಂಸ್ಕೃತಿ ರಾಜ್ಯಕ್ಕೂ ಪಸರಿಸಿದಂತಾಗಿದೆ. ಈ ಎಲ್ಲದರ ಮಧ್ಯೆ ಕಾಂತಾರ 2 ಚಿತ್ರ ಹೇಗಿರಲಿದೆ ಎಂಬ ಪ್ರಶ್ನೆಗಳೂ ಇದೆ. ಈ ಬೆನ್ನಲೆ ಕನ್ನಡ ಚಿತ್ರರಂಗದ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಕೋಣನ ಮೇಲೇರಿ ಕುಳಿತ ಪೋಸ್ಟರ್ ಸಿನಿ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಸೃಷ್ಠಿಸಿದೆ.

ಪ್ರಜ್ವಲ್ ದೇವರಾಜ್ ಅವರ ಸಿನಿಪಯಣದ 40ನೇ ಸಿನಿಮಾಗೆ ‘ಕರಾವಳಿ’ ಎಂಬ ಶೀರ್ಷಿಕೆ ಇಡಲಾಗಿದೆ. ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಕುತೂಹಲ ಕೆರಳಿಸಿದೆ. ಈ ಚಿತ್ರದ ಪ್ರೋಮೋ ಕೂಡ ಬಿಡುಗಡೆಯಾಗಿದ್ದು ರೋಚಕ ದೃಶ್ಯಗಳು ಕೌತುಕ ಮೂಡಿಸಿದೆ.

ಯಕ್ಷಗಾನದ ಗಾನ, ‘ಮಗನೇ ಮಹಿಷ’ ಎಂದು ಮಾರ್ಧನಿಸುತ್ತಿರುವ ಡೈಲಾಗ್ , ಇಡೀ ಟ್ರೇಲರ್‌ನಲ್ಲಿ ಕೋಣವನ್ನೇ ಹೆಚ್ಚಾಗಿ ತೋರಿಸಿದ್ದು ಮೈ ನವಿರೇಳಿಸುವಂತಿದೆ. ಒಟ್ಟಿನಲ್ಲಿ, ಕರಾವಳಿ ಭಾಗದ ಸಂಸ್ಕೃತಿ, ಯಕ್ಷಗಾನ, ಕಂಬಳ ಮುಂತಾದ ಅಂಶಗಳು ಈ ಸಿನಿಮಾದಲ್ಲಿ ಇರಲಿವೆ ಎಂದು ನಿರೀಕ್ಷಿಸಬಹುದಾಗಿದೆ. ಕರಾವಳಿ ಭಾಗದ ಕಥೆ ಆಗಿರುವುದರಿಂದ ಮಂಗಳೂರು ಭಾಗದಲ್ಲಿ ಚಿತ್ರೀಕರಣ ನಡೆಯಲಿದ್ದು, ಈವರೆಗೂ ಕಾಣದ ಹೊಸ ಲುಕ್‌ನಲ್ಲಿ ಪ್ರಜ್ವಲ್ ದೇವರಾಜ್ ಕಾಣಿಸಲಿದ್ದಾರೆ. ಆದರೆ ಈ ಸಿನಿಮಾಗೆ ನಾಯಕಿ ಯಾರಾಗ್ತಾರೆ ಅನ್ನೋದು ಮತ್ತೊಂದು ಕುತೂಹಲ

ಚಂದ್ರಶೇಖರ್ ಬಂಡಿಯಪ್ಪ ಅವರ ಕಥೆ, ಗುರುದತ್ ಗಾಣಿಗ ಅವರ ನಿರ್ದೇಶನ, ಜೊತೆಗೆ ವಿಕೆ ಫಿಲ್ಮ್÷್ಸ ಜೊತೆ ಸೇರಿ ನಿರ್ಮಾಣ ಮಾಡುತ್ತಿದ್ದಾರೆ. ಅಭಿಮನ್ಯು ಸದಾನಂದ ಛಾಯಾಗ್ರಹಣ ನಿರ್ದೇಶನ, ಸಚಿನ್ ಬಸ್ರೂರ್ ಸಂಗೀತ, ಪ್ರವೀಣ್ ಕಲ್ ಸಂಕಲನ ಈ ಚಿತ್ರಕ್ಕಿರಲಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!