ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ನಟ ಶಿವಣ್ಣಗೆ ಡಿಕೆಶಿಯಿಂದ ಲೋಕಸಭಾ ಚುನಾವಣಾ ಟಿಕೆಟ್ ಆಫರ್: ‘ಹೆಂಡ್ತಿ ಇಷ್ಟಪಡುತ್ತಿರುವುದನ್ನು ನೆರವೇರಿಸೋದು ಗಂಡನ ಕರ್ತವ್ಯ’ ಎಂದ ಹ್ಯಾಟ್ರಿಕ್ ಹೀರೋ: ಡಿಸಿಎಂ ಮಾತಿಗೆ ಸೈ ಅಂದ್ರ ಅಸುರ..?

ನಟ ಶಿವಣ್ಣಗೆ ಡಿಕೆಶಿಯಿಂದ ಲೋಕಸಭಾ ಚುನಾವಣಾ ಟಿಕೆಟ್ ಆಫರ್: ‘ಹೆಂಡ್ತಿ ಇಷ್ಟಪಡುತ್ತಿರುವುದನ್ನು ನೆರವೇರಿಸೋದು ಗಂಡನ ಕರ್ತವ್ಯ’ ಎಂದ ಹ್ಯಾಟ್ರಿಕ್ ಹೀರೋ: ಡಿಸಿಎಂ ಮಾತಿಗೆ ಸೈ ಅಂದ್ರ ಅಸುರ..?

ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ನಟ ಶಿವರಾಜ್ ಕುಮಾರ್ ಅವರಿಗೆ ಅವಕಾಶ ನೀಡಿದ್ದಾರೆ. ಆರ್ಯ ಈಡಿಗ ಸಮಾವೇಶದಲ್ಲಿ ಮಾತನಾಡಿದ ರಾಜ್ಯದ ಉಪಮುಖ್ಯಮಂತ್ರಿ ಡಿಕೆಶಿ ಅವರು ಚಿತ್ರ ಯಾವಾಗಾದರೂ ಮಾಡಬಹುದು, ಆದರೆ ಪಾರ್ಲಿಮೆಂಟ್‍ಗೆ ಹೋಗುವ ಅವಕಾಶ ಎಲ್ಲರಿಗೂ ಸಿಗಲ್ಲ. ಅವರು ಯಾವ ಕ್ಷೇತ್ರದಿಂದಲೂ ಸ್ಪರ್ಧಿಸಿದರೂ ಟಿಕೆಟ್ ನೀಡುವುದಾಗಿ ಘೋಷಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ನಟ ಶಿವರಾಜ್ ಕುಮಾರ್ ‘ನಮ್ಮ ತಂದೆ ಕೊಟ್ಟಿರುವ ಬಳವಳಿ ಬಣ್ಣ ಹಚ್ಚೋದನ್ನು ಮುಂದುವರಿಸಿಕೊಂಡು ಹೋಗುತ್ತೇನೆ. ನಮ್ಮದೇನಿದ್ದರೂ ಮೇಕಪ್ ಹಾಕೋದು, ಸಿನಿಮಾ ಮಾಡೋದು. ರಾಜಕೀಯ ನಮಗೆ ಬೇಡ, ನಾವು ಹೆಣ್ಣು ತೆಕ್ಕೊಂಡಿದ್ದು ಬಂಗಾರಪ್ಪ ಅವರ ಮಗಳನ್ನ. ಪತ್ನಿ ಗೀತಾ ಅವರಿಗೆ ಆಸಕ್ತಿಯಿದ್ದರೆ ರಾಜಕೀಯಕ್ಕೆ ಬರಲಿ. ಹೆಂಡ್ತಿ ಇಷ್ಟಪಡುತ್ತಿರುವುದನ್ನು ನೆರವೇರಿಸೋದು ಗಂಡನ ಕರ್ತವ್ಯ. ನಾನು ಅವರ ಬೆಂಬಲಕ್ಕೆ ಇರುತ್ತೇನೆ’ ಎಂದಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!