Home › ಕುಕ್ಕೇಡಿ; ಪಟಾಕಿ ಗೋಡೌನ್ ಸ್ಪೋಟ ಪ್ರಕರಣ: ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ಪೊಲೀಸರು: ಇಬ್ಬರು ಆರೋಪಿಗಳು ಫೆ 05 ರವರೆಗೆ ಪೊಲೀಸ್ ಕಸ್ಟಡಿಗೆ: ಕೋರ್ಟ್ ಆದೇಶ
ಕುಕ್ಕೇಡಿ; ಪಟಾಕಿ ಗೋಡೌನ್ ಸ್ಪೋಟ ಪ್ರಕರಣ: ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ಪೊಲೀಸರು: ಇಬ್ಬರು ಆರೋಪಿಗಳು ಫೆ 05 ರವರೆಗೆ ಪೊಲೀಸ್ ಕಸ್ಟಡಿಗೆ: ಕೋರ್ಟ್ ಆದೇಶ
ONLINE PUDU / Tuesday, January 30, 2024
ಬೆಳ್ತಂಗಡಿ: ಪಟಾಕಿ ತಯಾರಿಕಾ ಘಟಕದಲ್ಲಿ ಸಂಭವಿಸಿದ ಸ್ಟೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಸರ್ಕಲ್ ಇನ್ಸ್ ಪೆಕ್ಟರ್ ನಾಗೇಶ್ ಕದ್ರಿ ಅವರು ಇಂದು ಜ.30 ಬೆಳ್ತಂಗಡಿ ಕೋರ್ಟ್‌ಗೆ ಹಾಜರು ಪಡಿಸಿದ್ದಾರೆ.

ವೇಣೂರಿನ ಸೈಯದ್ ಬಶೀರ್(47)ಮತ್ತು ಹಾಸನದ ಕಿರಣ್(24)ಎಂಬ ಬಂಧಿತ ಆರೋಪಿಗಳನ್ನು 10 ದಿನ ಪೊಲೀಸ್ ಕಸ್ಟಡಿಗೆ ಪೊಲೀಸರು ಕೇಳಿದ್ದು ಆದರೆ ನ್ಯಾಯಾಲಯ ಆರೋಪಿಗಳಿಬ್ಬರನ್ನು ಫೆ 05 ರವರೆಗೆ ಪೊಲೀಸ್ ಕಸ್ಟಡಿ ನೀಡಿ ಆದೇಶ ನೀಡಿದೆ.
ಆರೋಪಿಗಳ ಪರ ವಕೀಲ ಅರುಣ್ ಬಂಗೇರ ವಾದಿಸಿದರು.