ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಬೆಳ್ತಂಗಡಿ : ಸರ್ಕಲ್ ಇನ್ಸ್ ಪೆಕ್ಟರ್ ನ್ನು ಸುಳ್ಳು ಪ್ರಕರಣದಲ್ಲಿ ಟ್ರ್ಯಾಪ್ ಮಾಡಿಸಿದ್ದ ದೂರುದಾರ ಖಾಕಿ ಬಲೆಗೆ: ಚೆಕ್ ಬೌನ್ಸ್ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಶ್ರೀನಿವಾಸ್ ಪ್ರಸಾದ್

ಬೆಳ್ತಂಗಡಿ : ಸರ್ಕಲ್ ಇನ್ಸ್ ಪೆಕ್ಟರ್ ನ್ನು ಸುಳ್ಳು ಪ್ರಕರಣದಲ್ಲಿ ಟ್ರ್ಯಾಪ್ ಮಾಡಿಸಿದ್ದ ದೂರುದಾರ ಖಾಕಿ ಬಲೆಗೆ: ಚೆಕ್ ಬೌನ್ಸ್ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಶ್ರೀನಿವಾಸ್ ಪ್ರಸಾದ್

ಬೆಳ್ತಂಗಡಿ : ಬೆಳ್ತಂಗಡಿ ಸರ್ಕಲ್ ಇನ್ಸ್ ಪೆಕ್ಟರ್ ಆಗಿದ್ದ ಗಂಗ್ಗಿರೆಡ್ಡಿ ಅವರನ್ನು ಸುಳ್ಳು ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರಿಗೆದೂರು ನೀಡಿ ಟ್ರ್ಯಾಪ್ ಮಾಡಿಸಿದ್ದ ದೂರುದಾರ ಶ್ರೀನಿವಾಸ್ ಪ್ರಸಾದ್ ಚೆಕ್ ಬೌನ್ಸ್ ಪ್ರಕರಣದಲ್ಲಿ ತಲೆಮರೆಸಿಕೊಂಡು ಸದ್ಯ ಖಾಕಿ ಬಲೆಗೆ ಬಿದಿದ್ದಾನೆ.

ಬೆಳ್ತಂಗಡಿ ನ್ಯಾಯಲಯದ ಸಿ.ಸಿ ನಂಬ್ರ 118/2021 ಕಲಂ.138 NI Act (ಚೆಕ್ ಬೌನ್ಸ್) ಪ್ರಕರಣದಲ್ಲಿ ವಾರಂಟು ಆರೋಪಿ ಶ್ರೀನಿವಾಸ್ ಪ್ರಸಾದ್(50) ಎಂಬಾತನನ್ನು ಬೆಳ್ತಂಗಡಿಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಮುರುಳಿಧರ್ ನಾಯ್ಕ್ ನೇತೃತ್ವದಲ್ಲಿ ಸಿಬ್ಬಂದಿ ವ್ರಷಭ ಮತ್ತು ಬಸವರಾಜ್ ರವರು ಜ.24 ರಂದು ಬೆಳ್ತಂಗಡಿ ತಾಲೂಕಿನ ಇಂದಬೆಟ್ಟುನಿಂದ ವಶಕ್ಕೆ ಪಡೆದು ಮಾನ್ಯ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

ಟ್ಯಾಪ್ ಪ್ರಕರಣ: ಬೆಳ್ತಂಗಡಿ ಸರ್ಕಲ್ ಇನ್ಸ್ ಪೆಕ್ಟರ್ ಆಗಿದ್ದ ಗಂಗ್ಗಿರೆಡ್ಡಿ ಅವರನ್ನು ಸುಳ್ಳು ಪ್ರಕರಣದಲ್ಲಿ ಚೆಕ್ ಬೌನ್ಸ್ ಆರೋಪಿ ಶ್ರೀನಿವಾಸ್ ಪ್ರಸಾದ್, ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿ ಟ್ರ್ಯಾಪ್ ಮಾಡಿಸಿದ್ದ. ಮಂಗಳೂರು ನ್ಯಾಯಾಲಯದಲ್ಲಿ ಈ ಪ್ರಕರಣದ ಆರೋಪ ಸಾಭಿತಾಗಿ ಸರ್ಕಲ್ ಇನ್ಸ್ ಪೆಕ್ಟರ್ ಅವರಿಗೆ ಶಿಕ್ಷೆ ಹಾಗೂ ದಂಡ ವಿಧಿಸಿಸಲಾಗಿತ್ತು. ನಂತರ 2022 ರಲ್ಲಿ ಹೈಕೋರ್ಟ್ ನಲ್ಲಿ ಇನ್ಸ್ ಪೆಕ್ಟರ್ ಗಂಗ್ಗಿರೆಡ್ಡಿ ಅವರ ಆರೋಪ ಪ್ರಕರಣ ಸುಳ್ಳು ಎಂದು ರದ್ದಾಗಿತ್ತು. ಇದೀಗ ಇನ್ಸ್ ಪೆಕ್ಟರ್ ಗಂಗ್ಗಿರೆಡ್ಡಿ ಅವರು ಗುಪ್ತಚರ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!