Home › ವೇಣೂರು : ಪಟಾಕಿ ತಯಾರಿಕಾ ಘಟಕ ಸ್ಫೋಟ ಪ್ರಕರಣ: ಇಬ್ಬರು ಪೊಲೀಸ್ ವಶಕ್ಕೆ: ಇಂದು ಬೆಳ್ತಂಗಡಿ ಕೋರ್ಟ್ ಗೆ ಹಾಜರು ಪಡಿಸಲು ಸೂಚನೆ:
ವೇಣೂರು : ಪಟಾಕಿ ತಯಾರಿಕಾ ಘಟಕ ಸ್ಫೋಟ ಪ್ರಕರಣ: ಇಬ್ಬರು ಪೊಲೀಸ್ ವಶಕ್ಕೆ: ಇಂದು ಬೆಳ್ತಂಗಡಿ ಕೋರ್ಟ್ ಗೆ ಹಾಜರು ಪಡಿಸಲು ಸೂಚನೆ:
ONLINE PUDU / Tuesday, January 30, 2024
ಬೆಳ್ತಂಗಡಿ: ಕುಕ್ಕೇಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಡ್ತ್ಯಾರು ಎಂಬಲ್ಲಿ ಜ.28 ರಂದು ಸಂಜೆ ಪಟಾಕಿ ಶೇಖರಣಾ ಘಟಕದಲ್ಲಿ ಸಂಭವಿಸಿದ ಸ್ಟೋಟ ಪ್ರಕರಣಕ್ಕೆಸಂಬಂಧಿಸಿ ಸ್ಥಳೀಯ ಮಹಿಳೆ ನೀಡಿದ ದೂರಿನ ಅನ್ವಯ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಘಟನೆ ನಡೆದ ಬಳಿಕ ಪಟಾಕಿ ತಯಾರಿಕಾ ಘಟಕದ ಮಾಲೀಕ ಸೈಯದ್ ಬಶೀರ್ (47ವ) ಮತ್ತು ಕಾರ್ಮಿಕರನ್ನು ಕರೆತಂದು ಕೆಲಸ ಮಾಡುತ್ತಿದ್ದ ಹಾಸನ ಜಿಲ್ಲೆಯ ವಡ್ಡರಹಳ್ಳಿ ನಿವಾಸಿ ಕಿರಣ್ (24ವ) ನಾಪತ್ತೆಯಾಗಿದ್ದರು. ನಂತರ ಪೊಲೀಸರು ಖಚಿತ ಮಾಹಿತಿ ಮೇರೆಗೆ ಸುಳ್ಯದಲ್ಲಿ ಇವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿ, ಇಬ್ಬರನ್ನು ಬಂಧಿಸಿದ್ದಾರೆ.
ಜ.29 ರಂದು ರಾತ್ರಿ ಇವರಿಬ್ಬರನ್ನೂ ಬೆಳ್ತಂಗಡಿ ನ್ಯಾಯಧೀಶರ ಮುಂದೆ ಹಾಜರುಪಡಿಸಿದ್ದಾರೆ. ನ್ಯಾಯಾಧೀಶರು ನ್ಯಾಯಾಂಗ ಬಂಧನ ವಿಧಿಸಿದ್ದು , ಇಂದು (ಜ.30 ) ಬೆಳ್ತಂಗಡಿ ಕೋರ್ಟ್‍ಗೆ ಹಾಜರುಪಡಿಸಲು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.