Home › ಬೆಳ್ತಂಗಡಿ : ಚಿರತೆ ದಾಳಿಯಿಂದ ಕಡವೆ ಸಾವು..!: ನೆರಿಯದ ಮಲ್ಲ ಪ್ರದೇಶದಲ್ಲಿ ಮೃತದೇಹ ಪತ್ತೆ: ಬೆಳ್ತಂಗಡಿ ಅರಣ್ಯ ಇಲಾಖೆಯಿಂದ ದಫನ
ಬೆಳ್ತಂಗಡಿ : ಚಿರತೆ ದಾಳಿಯಿಂದ ಕಡವೆ ಸಾವು..!: ನೆರಿಯದ ಮಲ್ಲ ಪ್ರದೇಶದಲ್ಲಿ ಮೃತದೇಹ ಪತ್ತೆ: ಬೆಳ್ತಂಗಡಿ ಅರಣ್ಯ ಇಲಾಖೆಯಿಂದ ದಫನ
ONLINE PUDU / Wednesday, January 17, 2024
ಬೆಳ್ತಂಗಡಿ : ಚಿರತೆ ದಾಳಿಯಿಂದ ಗಾಯಗೊಂಡಿದ್ದ ಕಡವೆ ತೀವ್ರ ರಕ್ತಸಾವ್ರದಿಂದ ಸಾವನ್ನಪ್ಪಿದ ಘಟನೆ ಜ.17 ರಂದು ನೆರಿಯಲ್ಲಿ ನಡೆದಿದೆ.
ಜ.16ರ ರಾತ್ರಿ ನೆರಿಯ ಅರಣ್ಯ ಪ್ರದೇಶದಲ್ಲಿ ಚಿರತೆ ದಾಳಿಯಿಂದ ಕಡವೆಯ ಕುತ್ತಿಗೆಗೆ ತೀವ್ರ ಗಾಯವಾಗಿದ್ದು, ಚಿರತೆಯಿಂದ ತನ್ನ ಪ್ರಾಣ ಉಳಿಸಲು ಕಡವೆ ತಪ್ಪಿಸಿಕೊಂಡು ಬಂದಿದೆ. ಆದರೆ ತೀವ್ರ ರಕ್ತಸಾವ್ರದಿಂದ ಇಂದು ಮಲ್ಲ ಪ್ರದೇಶದಲ್ಲಿ ಕಡವೆ ಸಾವನ್ನಪ್ಪಿದೆ.
ಈ ಬಗ್ಗೆ ಬೆಳ್ತಂಗಡಿ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದ್ದು, ನೆರಿಯ ಪಶು ವೈದ್ಯರು ಸ್ಥಳದಲ್ಲಿಯೇ ಶವಪರೀಕ್ಷೆ ಮಾಡಿ ಬಳಿಕ ಅರಣ್ಯ ಇಲಾಖೆಯವರು ದಫನ ಮಾಡಿದ್ದಾರೆ.