ಪತ್ರದಲ್ಲಿ, ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ 11 ವಾರ್ಡ್‍ಗಳಿಗೆ ನೀರು ಪೂರೈಕೆಗಾಗಿ ಸಮಗ್ರ ಕುಡಿಯುವ ನೀರು ಸರಬರಾಜು ಯೋಜನೆಯಲ್ಲಿ ರೂ. 13 ಕೋಟಿ ವೆಚ್ಚದ ಕಾಮಗಾರಿ ಪೂರ್ಣಗೊಂಡು 5 ವರ್ಷಗಳೇ ಕಳೆದಿದ್ದರೂ, ಇದುವೆಗೂ ನಾಗರೀಕರಿಗೆ ಒಂದು ಹನಿ ನೀರು ಕೊಡಲು ಸಾಧ್ಯವಾಗಿಲ್ಲ. ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇವರು ಅನುಷ್ಠಾನಗೊಳಿಸಿರುವ ರೂ. 13 ಕೋಟಿ ವೆಚ್ಚದ ಕಾಮಗಾರಿ ಇಂದಿಗೂ ಸಂಪೂರ್ಣವಾಗಿ ನಿಷ್ಪ್ರಯೋಜಕವಾಗಿದೆ. ಸುಮಾರು 13 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಈ ಯೋಜನೆ ನಿರ್ಲಕ್ಷ್ಯ ಹಾಗೂ ಅಸಡ್ಡೆಯಿಂದ ಇಂದಿಗೂ ಸಂಪೂರ್ಣ ನಿಷ್ಪ್ರಯೋಜಕವಾಗಿಯೇ ಉಳಿದಿದೆ. ಈ ಬಾರಿ ಮಳೆ ಕಡಿಮೆಯಾಗಿರುವುದರಿಂದ, ನದಿಗಳಲ್ಲಿ ನೀರಿನ ಹರಿವು ಈಗಾಗಲೇ ನಿಂತಿದೆ. ನಗರದಲ್ಲಿ ನೀರಿನ ಸಮಸ್ಯೆ ಈಗಾಗಲೇ ವ್ಯಾಪಕವಾಗಿ ಕಾಡತೊಡಗಿದೆ. ಆದುದರಿಂದ ನಗರದ ಜನರ ಅನುಕೂಲಕ್ಕಾಗಿ ಮಾಡಿದ ಕೋಟ್ಯಾಂತರ ವೆಚ್ಚದ ಕುಡಿಯುವ ನೀರಿನ ಈ ಯೋಜನೆಗೆ ಶೀಘ್ರವಾಗಿ ಕಾಯಕಲ್ಪ ನೀಡಿ, ಕಾಮಗಾರಿಯ ಸಂಪೂರ್ಣ ಪ್ರಯೋಜನ ನಗರದ ಜನರಿಗೆ ತ್ವರಿತವಾಗಿ ದೊರೆಯುವಂತಾಗಲು ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.
Home › ಬೆಳ್ತಂಗಡಿ: ನಗರದಲ್ಲಿ ಕಾಡತೊಡಗಿದ ನೀರಿನ ಸಮಸ್ಯೆ: 13 ಕೋಟಿ ವೆಚ್ಚದ ಕಾಮಗಾರಿ ನಿಷ್ಪ್ರಯೋಜಕ : ನಗರಾಭಿವೃದ್ಧಿ ಸಚಿವರಿಗೆ ಕೆ.ಪ್ರತಾಪ್ ಸಿಂಹ ನಾಯಕ್ ಪತ್ರ