ಬೆಂಗಳೂರು ಉತ್ತರದ ದಿವಾನರ ಪಾಳ್ಯ ಗೋಕುಲ ನಿವಾಸಿ ಚಾರ್ಲ್ಸ್ ಮಧುಕರ್ ಮಗ ಅನಿಲ್ ಎಂ ಡೇವಿಡ್(49) ಎಂಬಾತ ಈ ಪ್ರಕರಣದ 4 ನೇ ಆರೋಪಿಯಾಗಿದ್ದು ಈತ ಪಟಾಕಿ ತಯಾರಿಕೆಗೆ ರಾಸಾಯನಿಕಗಳನ್ನು ಸರಬರಾಜು ಮಾಡುವ ಲೈಸನ್ಸ್ ಪಡೆದಿದ್ದಾನೆ. ಪಟಾಕಿ ತಯಾರಿಕೆ ಮಾಡುವವರಿಗೆ ಈತ ತಮಿಳುನಾಡಿನಿಂದ ನೇರವಾಗಿ ಬಿಲ್ ಮಾಡಿ ಕಳುಹಿಸಿಕೊಡುವ ಕೆಲಸ ಮಾಡುತ್ತಿದ್ದ. ಹೀಗಾಗಿ ವೇಣೂರಿನ ಪಟಾಕಿ ಕಾರ್ಖಾನೆಯ ಮಾಲಕ ಬಶೀರ್‌ಗೆ ಅಧಿಕ ಪ್ರಮಾಣದಲ್ಲಿ ಪಟಾಕಿ ರಾಸಾಯನಿಕಗಳನ್ನು ಸರಬರಾಜು ಮಾಡಿದ್ದ ಆರೋಪದಲ್ಲಿ ಪೊಲೀಸರು ಈತನನ್ನು ಬಂಧಿಸಿದ್ದಾರೆ.
ಫೆ.4 ರಂದು ಬೆಂಗಳೂರಿನಿಂದಬಂಧಿಸಿ ಫೆ.5 ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು. ಆರೋಪಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.