ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ವಗ್ಗ, ಕಾರು ಬೈಕ್ ಅಪಘಾತ, ಬೆಳ್ತಂಗಡಿಯ ಯುವಕ ದಾರುಣ ಸಾವು:

ವಗ್ಗ, ಕಾರು ಬೈಕ್ ಅಪಘಾತ, ಬೆಳ್ತಂಗಡಿಯ ಯುವಕ ದಾರುಣ ಸಾವು:

 

 

ಬೆಳ್ತಂಗಡಿ: ಕಾರು ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ  ಯುವಕನೊಬ್ಬ  ಸಾವನ್ನಪ್ಪಿದ ಘಟನೆ ವಗ್ಗ ಸಮೀಪದ ಮಧ್ವ ಎಂಬಲ್ಲಿ ಫೆ 01 ರಂದು ಸಂಜೆ ನಡೆದಿದೆ. ಮೃತ ಯುವಕನನ್ನು ಬೆಳ್ತಂಗಡಿಯ  ಪ್ರದೀಶ್ ಶೆಟ್ಟಿ(27) ಎಂದು ಗುರುತಿಸಲಾಗಿದೆ.  ಮಂಗಳೂರಿನಿಂದ ಬೆಳ್ತಂಗಡಿ ಕಡೆಗೆ ಬೈಕ್ಕಿನಲ್ಲಿ ಬರುತಿದ್ದ ವೇಳೆ ಮಂಗಳೂರು ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿಯ ಕಾವಳಕಟ್ಟೆ ಎಂಬಲ್ಲಿ ಪ್ರದೀಶ್ ಬೈಕ್ಕಿಗೆ  ಎದುರಿನಿಂದ ಬರುತಿದ್ದ  ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಅವರು ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದು ತಕ್ಷಣ ಸ್ಥಳೀಯರು ಸಮೀಪದ  ಆಸ್ಪತ್ರೆಗೆ ಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕೊಂಡು ಹೋದರೂ ಅದಾಗಲೇ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಪ್ರದೀಶ್ ಬೆಳ್ತಂಗಡಿಯ ಖಾಸಗಿ ಸಂಸ್ಥೆಯೊಂದರಲ್ಲಿ ನೌಕರಿಯಲ್ಲಿದ್ದು ಸಂಸ್ಥೆಯ ಕೆಲಸಕ್ಕಾಗಿ ಮಂಗಳೂರಿಗೆ ತೆರಳಿದ್ದಾರೆನ್ನಲಾಗಿದೆ. ಈ ಬಗ್ಗೆ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!