Home › ಉಜಿರೆ ,ಲಾರಿ ಚಾಲಕನ ನಿರ್ಲಕ್ಷ್ಯ ಚಾಲನೆ: ಲಾರಿಯಡಿಗೆ ಸಿಲುಕಿ ಬಸ್ ಕಾಯುತಿದ್ದ ಇಬ್ಬರು ಸಾವು:
ಉಜಿರೆ ,ಲಾರಿ ಚಾಲಕನ ನಿರ್ಲಕ್ಷ್ಯ ಚಾಲನೆ: ಲಾರಿಯಡಿಗೆ ಸಿಲುಕಿ ಬಸ್ ಕಾಯುತಿದ್ದ ಇಬ್ಬರು ಸಾವು:
ONLINE PUDU / Sunday, February 04, 2024
ಉಜಿರೆ:ಲಾರಿ ಚಾಲಕನ ವೇಗ ಹಾಗೂ ನಿರ್ಲಕ್ಷ್ಯ ಚಾಲನೆಗೆ ಲಾರಿಯಡಿಗೆ ಸಿಲುಕಿ ಬಸ್ ಕಾಯುತಿದ್ದ ಅಮಾಯಕರು ಬಲಿಯಾದ ಘಟನೆ. ಉಜಿರೆ ಸಮೀಪ ಮಧ್ಯಾಹ್ನ ನಡೆದಿದೆ.
ಉಜಿರೆ ಸಮೀಪದ ಗಾಂಧಿ ನಗರ ತಿರುವು ಬಳಿ ಬಸ್ ಗಾಗಿ ಪುರುಷ ಹಾಗೂ ಮಹಿಳೆ ರಸ್ತೆ ಬದಿ ನಿಂತಿದ್ದ ವೇಳೆ ಉಜಿರೆ ಕಡೆಯಿಂದ ತಿರುವಿನಲ್ಲಿ ಅತೀ ವೇಗವಾಗಿ ಬಂದ ಲಾರಿ ಇಬ್ಬರಿಗೆ ಡಿಕ್ಕಿ ಹೊಡೆದದ್ದಲ್ಲದೆ ವಿದ್ಯುತ್ ಕಂಬ ಸಮೀಪದ ಕಟ್ಟಡಕ್ಕೆ ಹಾನಿಯುಂಟಾಗಿದೆ. ಸಾವನ್ನಪ್ಪಿದವರ ಮಾಹಿತಿ ಇನ್ನಷ್ಟೇ ಸಿಗಬೇಕಿದೆ. ರಸ್ತೆಯಲ್ಲಿ ವಾಹನ ಸಂಚಾರ ಬ್ಲಾಕ್ ಆಗಿದೆ.