ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ವೃದ್ಧ ಮಾವನಿಗೆ ಸೊಸೆಯಿಂದ ಥಳಿತ: ಸಿಸಿಟಿವಿಯಲ್ಲಿ ಕೃತ್ಯ ಸೆರೆ: ಪತ್ನಿ ವಿರುದ್ಧ ಪತಿ ದೂರು

ವೃದ್ಧ ಮಾವನಿಗೆ ಸೊಸೆಯಿಂದ ಥಳಿತ: ಸಿಸಿಟಿವಿಯಲ್ಲಿ ಕೃತ್ಯ ಸೆರೆ: ಪತ್ನಿ ವಿರುದ್ಧ ಪತಿ ದೂರು

ಮಂಗಳೂರು: ವೃದ್ಧ ಮಾವನಿಗೆ ಸೊಸೆಯೊಬ್ಬಳು ಅಮಾನವೀಯವಾಗಿ ಥಳಿಸಿರುವ ಘಟನೆ ಮಾರ್ಚ್ 9ರಂದು ಮಂಗಳೂರಿನ ಕುಲಶೇಖರದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಪದ್ಮನಾಭ ಸುವರ್ಣ (87) ಎಂಬವರ ಮೇಲೆ ಸೊಸೆ ಉಮಾಶಂಕರಿ ಎಂಬಾಕೆ ವಾಕಿಂಗ್ ಸ್ಟಿಕ್ ನಿಂದ ಥಳಿಸಿದ್ದಾಳೆ. ಈ ವೇಳೆ ಪದ್ಮನಾಭ ಸುವರ್ಣ ಅವರು ಹೊಡೆಯದಿರುವಂತೆ ತಡೆಯಲು ಬಂದಾಗ ಅವರನ್ನು ತಳ್ಳಿದ್ದಾಳೆ. ಪರಿಣಾಮ ಪದ್ಮನಾಭ ಸುವರ್ಣ ಅವರು, ಸೋಫಾದ ಮೇಲೆಯೇ ಬಿದ್ದು ನೋವಿನಿಂದ ಅಳುತ್ತಿರುವ ಧ್ವನಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಮಂಗಳೂರು ನಗರದ ಅತ್ತಾವರದ ಕೆಇಬಿಯಲ್ಲಿ ಅಧಿಕಾರಿಯಾಗಿರುವ ಉಮಾಶಂಕರಿಯ ಪತಿ ಪ್ರೀತಂ ಸುವರ್ಣ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಅವರು ವಿದೇಶದಲ್ಲಿದ್ದುಕೊಂಡೇ ಸಿಸಿ ಕ್ಯಾಮೆರಾ ಪರಿಶೀಲನೆ ಮಾಡಿದಾಗ ತನ್ನ ಹೆಂಡತಿಯ ರಾಕ್ಷಸಿ ಕೃತ್ಯ ಬೆಳಕಿಗೆ ಬಂದಿದೆ.

ಸದ್ಯ ಗಾಯಾಳು ಪದ್ಮನಾಭ ಸುವರ್ಣ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಪತಿಯೇ ಪತ್ನಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!