ಕಾರ್ಯಕ್ರಮ ವನ್ನು ಮೀನಾಕ್ಷಿ ನಾಯ್ಗ ಅಟ್ಲಾಜೆ ಉದ್ಘಾಟಿಸಿದರು. ಮಧ್ಯಾಹ್ನ ಬಂಟರ ಗ್ರಾಮ ಸಮಿತಿ ಅಧ್ಯಕ್ಷ ಹರೀಶ್ ಶೆಟ್ಟಿ ಕರಂಬಿತ್ತಿಲು ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಕ್ರೀಡೋತ್ಸವ ಮಾಡುತ್ತಿರುವುದು ಕೇವಲ ಮನರಂಜನೆಗಾಗಿ ಅಲ್ಲ ಸಮುದಾಯದ ಜನರ ಒಟ್ಟುಗೂಡುವಿಕೆಗೆ. ಜೊತೆಗೆ ಸಮಾಜ ಮುಖಿ ಕಾರ್ಯ ಕ್ರಮ ನಡೆಸುವುದಕ್ಕಾಗಿ. ಅಲ್ಲದೆ ಬಳಂಜ ಗ್ರಾಮ ದ ಒಬ್ಬ ಬಡ ಕುಟುಂಬದ ವಿದ್ಯಾರ್ಥಿನಿರ್ಯೋಳ ಶಿಕ್ಷಣ ದ ಸಂಪೂರ್ಣ ಜವಾಬ್ದಾರಿ ಯನ್ನು ನಮ್ಮ ಬಂಟರ ಗ್ರಾಮ ಸಮಿತಿ ಹೊತ್ತುಕೊಂಡಿವೆ ಎಂದರು.
ಮಕ್ಕಳಿಗೆ ಲಿಂಬೆಹುಳಿ ಚಮಚ ಓಟ, ಬಾಲ್ ಪಾಸಿಂಗ್, ಲಕ್ಕಿ ಗೇಮ್, ಗೋಣಿಚೀಲ ಓಟ, ಸೂಜಿ ನೂಲು ಸ್ಪರ್ಧೆ, ಮಹಿಳೆಯರಿಗೆ ತ್ರೋಬಾಲ್, ಗುಂಡೆಸೆತ, ಸಂಗೀತ ಕುರ್ಚಿ, ಹಗ್ಗ ಜಗ್ಗಾಟ , ಪುರುಷರಿಗೆ ಗುಂಡೆಸೆತ, ವಾಲಿಬಾಲ್, ಹಗ್ಗ ಜಗ್ಗಾಟ ಹಾಗು ಪುರುಷರಿಗೆ ಸೂಜಿಗೆ ನೂಲು ಹಾಕುವ ಸ್ಪರ್ಧೆ ಹಾಗು ವಿವಿಧ ಸ್ಪರ್ಧೆ ಜರಗಿತು .
ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಚಲನಚಿತ್ರ ಹಾಗೂ ಕಿರುತೆರೆ ನಿರ್ದೇಶಕ ವಿನು ಬಳಂಜ, ರವೀಂದ್ರ ಶೆಟ್ಟಿ ಬಳಂಜ, ಸಂಜೀವ ಶೆಟ್ಟಿ ಕುಂಠಿನಿ, ಸುರೇಶ್ ಶೆಟ್ಟಿ ಲಾಯಿಲ, ದೇವಿ ಪ್ರಸಾದ್ ಶೆಟ್ಟಿ ಬಿರ್ಮನೊಟ್ಟು, ಶೋಭಾ. ವಿ. ಶೆಟ್ಟಿ . ಸಮಾರೋಪ ಸಮಾರಂಭದಲ್ಲಿ ಸಮಿತಿ ಅಧ್ಯಕ್ಷ ರಾದ ಹರೀಶ್ ಶೆಟ್ಟಿ ಕರಂಬಿತ್ತಿಲು,ಸತೀಶ್ ರೈ ಬಾರ್ದಡ್ಕ, ನವೀನ್ ಶೆಟ್ಟಿ ಸಾಮಾನಿ ಕರಂಬಾರು, ಪ್ರಶಾಂತ್ ಶೆಟ್ಟಿ ಕರಂಬಾರು, ವಿನು ಬಳಂಜ, ರಾಜೇಂದ್ರ ಶೆಟ್ಟಿ ಕುರೆಲ್ಯ, ವಸಂತ ಶೆಟ್ಟಿ ಮಜಲು ಅಜಿತ್ ರೈ ಅನಿಲ್ ಶೆಟ್ಟಿ, ಕಾರ್ಯದರ್ಶಿ ಅಶೋಕ್ ಶೆಟ್ಟಿ ಪೊಸಮಾರ್, ಸದಾಶಿವ ಶೆಟ್ಟಿ ತಾರೀದೊಟ್ಟು ಸಮಿತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮ ವನ್ನು ಭಾಸ್ಕರ್ ಶೆಟ್ಟಿ ಕಾರ್ಯಾಣ ಹಾಗು ಹರೀಶ್ ಶೆಟ್ಟಿ ಕುಪ್ಪೆಟ್ಟಿ ನಿರೂಪಿಸಿದರು.