ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ‘ಕಾಟೇರ 2 ಬರುವುದು ಬೇಡ: ನಾನು ಯಾವುದೇ ಕಾರಣಕ್ಕೂ ಸೀಕ್ವೆಲ್ ಸಿನಿಮಾಗಳನ್ನು ಮಾಡಲ್ಲ’: ಕಾಟೇರ 2 ಬಗ್ಗೆ ನಟ ದರ್ಶನ್: ಯಾಕಿಷ್ಟು ಖಡಕ್ ರಿಯ್ಯಾಕ್ಷನ್?

‘ಕಾಟೇರ 2 ಬರುವುದು ಬೇಡ: ನಾನು ಯಾವುದೇ ಕಾರಣಕ್ಕೂ ಸೀಕ್ವೆಲ್ ಸಿನಿಮಾಗಳನ್ನು ಮಾಡಲ್ಲ’: ಕಾಟೇರ 2 ಬಗ್ಗೆ ನಟ ದರ್ಶನ್: ಯಾಕಿಷ್ಟು ಖಡಕ್ ರಿಯ್ಯಾಕ್ಷನ್?

ಕನ್ನಡ ಸಿನಿಮಾ ಕಾಟೇರ ಬರೀ ಎಂಟರ್‍ಟೈನ್ಮೆಂಟ್ ಚಿತ್ರ ಅಂತ ಹೇಳೋಕೆ ಸಾಧ್ಯಾನೆ ಇಲ್ಲ. ಯಾಕೆಂದ್ರೆ ಸಾಮಾಜಿಕ ವ್ಯವಸ್ಥೆ ಬಗ್ಗೆ ಕಾಟೇರ ಚಿತ್ರ ಬಹಳಷ್ಟು ಮಾತಾಡಿದೆ. ಕಥೆ, ನಿರ್ದೇಶನ ಸೇರಿದಂತೆ ಪಾತ್ರಗಳು ಪ್ರೇಕ್ಷಕರ ಮನಸ್ಸು ಗೆದ್ದು 50ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ನೂರು ದಿನವನ್ನು ಪೂರೈಸಿದೆ. ಸದ್ಯ ಕಾಟೇರ 2 ಚಿತ್ರ ಬರುತ್ತಾ ಅಂತ ಕಾಯ್ತಾ ಇದ್ದ ಪ್ರೇಕ್ಷಕರಿಗೆ ಶಾಂಕಿಂಗ್ ರೀತಿಯಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ರಿಯ್ಯಾಕ್ಷನ್ ನೀಡಿದ್ದಾರೆ.

ಕಾಟೇರ್ 2 ಬಗ್ಗೆ ಮಾತನಾಡಿದ ಅವರು, "ನಾನು ಯಾವುದೇ ಕಾರಣಕ್ಕೂ ಸೀಕ್ವೆಲ್ ಸಿನಿಮಾಗಳನ್ನು ಮಾಡಲ್ಲ. ಕಾಟೇರ 2 ಬರುವುದು ಬೇಡ, ಅದು ಮಾಸ್ಟರ್ ಪೀಸ್. ಗೆದ್ದ ಎತ್ತಿನ ಬಾಲ ಹಿಡಿಯೋದು ನನಗೆ ಇಷ್ಟ ಇಲ್ಲ’ ಎಂದಿದ್ದಾರೆ.

ಕಾಟೇರ ಈಗಾಗಲೆ ಜನಮನ ಗೆದ್ದಿದೆ. ಸಿನಿಮಾ ಬಗ್ಗೆ ಒಳ್ಳೆಯ ಅಭಿಪ್ರಾಯ ಇರೋದ್ರಿಂದ ಕಾಟೇರ 2 ಸಿನಿಮಾ ಬಗ್ಗೆ ತಂಡ ಯೋಚಿಸಿಲ್ಲ. ಜಾತಿ ವ್ಯವಸ್ಥೆ, ಅಸ್ಪೃಶ್ಯತೆ, ಅನ್ಯಾಯ ಜೊತೆಗೆ ಉಳುವವನೇ ಭೂಮಿಯ ಒಡೆಯ ಕಾಯ್ದೆ ದೇಶದಲ್ಲಿ ಎಂತಾ ಬದಲಾವಣೆ ತಂದಿತ್ತು ಎಂಬುದನ್ನು ಸಿನಿಮಾ ತೆರೆ ಮೇಲೆ ಪ್ರದರ್ಶಿಸಿದೆ.

ಕಾಟೇರ 2 ಮಾಡಲ್ಲ ಎಂದ ನಟ ದರ್ಶನ್ ಇದೇ ಟೀಮ್ ಮುಂದಿನ ದಿನಗಳಲ್ಲಿ ಬೇರೆ ಸಿನಿಮಾ ಮಾಡುತ್ತದೆ ಎಂದು ಪ್ರೇಕ್ಷಕರಿಗೆ, ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!