ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › 21 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ: ನಿವೃತ್ತಿ ಪಡೆದು ಹುಟ್ಟೂರಿಗೆ ಆಗಮಿಸಿದ ಗಣೇಶ್ ಬಿ.ಎಲ್: ತಾಲೂಕು ಮರಾಠಿ ಸಮಾಜ ಸೇವಾ ಸಂಘದ ನೇತೃತ್ವದಲ್ಲಿ ಭವ್ಯಸ್ವಾಗತ

21 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ: ನಿವೃತ್ತಿ ಪಡೆದು ಹುಟ್ಟೂರಿಗೆ ಆಗಮಿಸಿದ ಗಣೇಶ್ ಬಿ.ಎಲ್: ತಾಲೂಕು ಮರಾಠಿ ಸಮಾಜ ಸೇವಾ ಸಂಘದ ನೇತೃತ್ವದಲ್ಲಿ ಭವ್ಯಸ್ವಾಗತ

ಬೆಳ್ತಂಗಡಿ: 21ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಪಡೆದು ಹುಟ್ಟೂರಿಗೆ ಆಗಮಿಸಿದ ಲಾಯಿಲದ ಗಣೇಶ್ ಬಿ.ಎಲ್ ಅವರಿಗೆ ತಾಲೂಕು ಮರಾಠಿ ಸಮಾಜ ಸೇವಾ ಸಂಘದ ನೇತೃತ್ವದಲ್ಲಿ ಮೇ.04ರಂದು ಭವ್ಯ ಸ್ವಾಗತ ಕೋರಲಾಯಿತು.

ಬೆಳಿಗ್ಗೆ ಕುತ್ಯಾರು ದೇವಸ್ಥಾನದಿಂದ ತೆರೆದ ವಾಹನದಲ್ಲಿ ಗಣೇಶ್ ಬಿಎಲ್. ಅವರನ್ನು ಮೆರವಣಿಗೆ ಮೂಲಕ ಕರೆತಂದು ಬಳಿಕ ಬೆಳ್ತಂಗಡಿ ಬಸ್ ನಿಲ್ದಾಣದ ಸಮೀಪ ಅಭಿನಂದನಾ ಸಭೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಮರಾಠಿ ಸಂಘದ ಮುಖಂಡ ಉಮೇಶ್ ಕೇಳ್ತಡ್ಕ , ನ್ಯಾಯವಾದಿ ಮನೋಹರ ಕುಮಾರ್ ಇಳಂತಿಲ, ವಕೀಲರ ಸಂಘದ ಕಾರ್ಯದರ್ಶಿ ನವೀನ್ ಬಿ.ಕೆ, ಬಳೆಂಜ ಗ್ರಾ.ಪಂ ಸದಸ್ಯ ರವೀಂದ್ರ ಅಮೀನ್, ಕೆಡಿಪಿ ಸದಸ್ಯ ಸಂತೋಷ್ ಕುಮಾರ್, ಲಾಯಿಲ ಗ್ರಾ.ಪಂ ಸದಸ್ಯ ಗಣೇಶ್, ಸುರೇಶ್ ಶೆಟ್ಟಿ, ಪ್ರಶಾಂತ್, ವಿನಯ ಕುಮಾರ್, ಶೇಖರ ಲಾಯಿಲ, ಮರಾಠಿ ಸಂಘದ ಪದಾಧಿಕಾರಿಗಳು ಮುಖಂಡರುಗಳು ಉಪಸ್ಥಿತರಿದ್ದರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!