ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಮಹಾರಾಷ್ಟ್ರದಲ್ಲಿ ಕೋವಿಡ್ ರೂಪಾಂತರಿ ಪತ್ತೆ!: 91 ಮಂದಿಯಲ್ಲಿ ಸೋಂಕು ದೃಢ

ಮಹಾರಾಷ್ಟ್ರದಲ್ಲಿ ಕೋವಿಡ್ ರೂಪಾಂತರಿ ಪತ್ತೆ!: 91 ಮಂದಿಯಲ್ಲಿ ಸೋಂಕು ದೃಢ

ನವದೆಹಲಿ: ಕೋವಿಡ್ 19 ನ ರೂಪಾಂತರಿ ಮಹಾರಾಷ್ಟ್ರದಲ್ಲಿ ಪತ್ತೆಯಾಗಿದ್ದು 91 ಮಂದಿಯಲ್ಲಿ ಸೋಂಕು ದೃಢವಾಗಿದೆ.

ಅಮೆರಿಕದಲ್ಲಿ ವೇಗವಾಗಿ ಹರಡುತ್ತಿರುವ ಹೊಸ ಕೋವಿಡ್ 19 ರೂಪಾಂತರಿ ಎಫ್‍ಎಲ್‍ಐಆರ್‍ಟಿ ಮಹಾರಾಷ್ಟ್ರದಲ್ಲೂ ಪತ್ತೆಯಾಗಿದ್ದು ಆದರೆ, ಈ ಸೋಂಕಿನ ಬಗ್ಗೆ ತಕ್ಷಣಕ್ಕೆ ಹೆಚ್ಚು ಆತಂಕಪಡುವ ಅಗತ್ಯವಿಲ್ಲ ಎಂದು ತಜ್ಞರು ಹೇಳಿದ್ದಾರೆ.

ಫ್ಲರ್ಟ್ ಎಂದು ಕರೆಯಲ್ಪಡುತ್ತಿರುವ ಈ ಸೋಂಕು ಕೆಪಿ.1.1 ಮತ್ತು ಕೆಪಿ.2 ತಳಿಗಳ ರೂಪಾಂತರ ಒಳಗೊಂಡಿದೆ. ಈ ತಳಿಗಳ ರೂಪಾಂತರಗಳ ತಾಂತ್ರಿಕ ಹೆಸರುಗಳ ಆಧಾರದ ಮೇಲೆ ಅವುಗಳನ್ನು ಹೆಸರಿಸಲಾಗಿದೆ.

ಮಾರ್ಚ್ ಮತ್ತು ಏಪ್ರಿಲ್‍ನಲ್ಲಿ ಸಂಗ್ರಹಿಸಲಾದ ಜಿನೋಮ್ ಸೀಕ್ವೆನ್ಸಿಂಗ್‍ನಲ್ಲಿ ಕೆಪಿ.2ನ 91 ಪ್ರಕರಣಗಳು ಮಹಾರಾಷ್ಟ್ರದಲ್ಲಿ ಕಂಡುಬಂದಿವೆ. ಇದರಲ್ಲಿ ಪುಣೆಯಲ್ಲಿ 51, ಥಾಣೆ 20, ಅಮರಾವತಿ 7, ಔರಂಗಬಾದ್ 7, ಸೋಲಪುರ್ 2, ಅಹಮದ್‍ನಗರ 1, ನಾಸಿಕ್ 1, ಲಾತೂರ್ 1 ಮತ್ತು ಸಾಂಗ್ಲಿಯಲ್ಲಿ 1 ಪ್ರಕರಣ ಪತ್ತೆಯಾಗಿದೆ.

ದಾಖಲಾದ 91 ಪ್ರಕರಣದಲ್ಲಿ ತೀವ್ರತರದ ಕಾಯಿಲೆ ವರದಿಯಾಗಿಲ್ಲ. ಅಲ್ಲದೇ, ಪಾಸಿಟಿವ್ ದರ ಕೂಡ ಕೇವಲ ಶೇ.1ರಷ್ಟಿದೆ.

ಮೂಗು ಸೋರುವಿಕೆ, ಗಂಟಲು ಕೆರೆತ, ಸುಸ್ತು, ಜ್ವರ, ತಲೆನೋವು, ಸ್ನಾಯು ನೋವು, ಕೆಲವು ಬಾರಿ ರುಚಿ ಅಥವಾ ವಾಸನೆ ನಷ್ಟದ ಲಕ್ಷಣಗಳನ್ನು ಹೊಂದಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!