ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ನಟ ರಮೇಶ್ ಅರವಿಂದ್ ಮುಂದೆ ಪೆನ್ ಡ್ರೈವ್..!: ಪ್ರಜ್ವಲ್ ಕೇಸ್ ಬೆನ್ನಲ್ಲೇ ಮತ್ತೊಂದು ಪೆನ್ ಡ್ರೈವ್ ಸದ್ದು: ರಮೇಶ್ ಶಾಕ್ : ವಿಡಿಯೋ ವೈರಲ್.!

ನಟ ರಮೇಶ್ ಅರವಿಂದ್ ಮುಂದೆ ಪೆನ್ ಡ್ರೈವ್..!: ಪ್ರಜ್ವಲ್ ಕೇಸ್ ಬೆನ್ನಲ್ಲೇ ಮತ್ತೊಂದು ಪೆನ್ ಡ್ರೈವ್ ಸದ್ದು: ರಮೇಶ್ ಶಾಕ್ : ವಿಡಿಯೋ ವೈರಲ್.!

ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಅವರ ಪೆನ್ ಡ್ರೈವ್ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದ್ದು, ಈ ಮಧ್ಯೆ ನಟ ರಮೇಶ್ ಅರವಿಂದ್ ಮುಂದೆ ಒಂದು ಪೆನ್ ಡ್ರೈವ್ ಬಂದುಬಿಟ್ಟಿದೆ. ಪೆನ್ ಡ್ರೈವ್ ನೋಡ್ತಿದ್ದಂತೆ ರಮೇಶ್ ಅರವಿಂದ್ ಗಾಬರಿಗೊಂಡಿದ್ದಾರೆ.

ರಮೇಶ್ ಅರವಿಂದ್ ಅವರು ಸೆಟ್‌ನಿಂದ ಹೊರ ಬರುತ್ತಿದ್ದಂತೆ ವ್ಯಕ್ತಿಯೋರ್ವರು  ಪೆನ್ ಡ್ರೈವ್ ನೀಡಿದ್ದಾರೆ. ಆಗ ರಮೇಶ್ ಶಾಕ್ ಗೆ ಒಳಗಾಗಿ ‘ಎನ್ರಿ ಇದು ಪೆನ್ ಡ್ರೈವ್, ಮೊದಲು ಈ ಪೆನ್ ಡ್ರೈವ್ ನ ಫ್ರೆಮ್‌ನಿಂದ ತೆಗೆಯಿರಿ’ ಎಂದು ಹೇಳಿದ್ದಾರೆ.

ಇಷ್ಟಕ್ಕೂ ಇದು ಅಂತಿಂತ  ಪೆನ್ ಡ್ರೈವ್ ಅಲ್ಲ. ಖಾಸಗಿ ವಾಹಿನಿಗಳು ನಡೆಸುವ ರಿಯಾಲಿಟಿ ಶೋ ಕಾರ್ಯಕ್ರಮಗಳ ಪ್ರಮೋಷನ್‌ಗೆ ಹೊಸ ಹೊಸ ತಂತ್ರ ಬಳಸುತ್ತಿದ್ದು, ಈಗ ‘ಜೀ ಪಿಚ್ಚರ್’ನ ಶಾರ್ಟ್ ಫಿಲ್ಮ್ ಸ್ಪರ್ಧೆ ಏರ್ಪಡಿಸಿದೆ. ಇದರ ಪ್ರಮೋಷನ್‌ಗೆ ಪೆನ್ ಡ್ರೈವ್  ಡ್ರಾಮಾ ಮಾಡಲಾಗಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ‘ಜೀ ಪಿಚ್ಚರ್’ ನಡೆಸುತ್ತಿರುವ ಕಿರುಚಿತ್ರ ಸ್ಪರ್ಧೆಯ ಷರತ್ತಿನ ವಿವರ ಹೀಗಿದೆ..

ಕಿರುಚಿತ್ರ ನೋಂದಾಯಿಸಲು ಮೇ 21ರಿಂದ ಜೂನ್ 8ರವರೆಗೆ ‘ಜೀ ಆ್ಯಪ್’ನಲ್ಲಿ ಅವಕಾಶ ಇದೆ.

ಒಂದು ಅಥವಾ ಹಲವು ಕಿರುಚಿತ್ರ ಸ್ವೀಕರಿಸಲಾಗುತ್ತದೆ

ಕಿರುಚಿತ್ರ ಕನ್ನಡ ಭಾಷೆಯಲ್ಲೇ ಇರಬೇಕು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!