ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಬೆಳ್ತಂಗಡಿ : ಹಿರಿಯ ರಾಜಕೀಯ ಮುಖಂಡ ತುಂಗಪ್ಪಗೌಡ ನಿಧನ

ಬೆಳ್ತಂಗಡಿ : ಹಿರಿಯ ರಾಜಕೀಯ ಮುಖಂಡ ತುಂಗಪ್ಪಗೌಡ ನಿಧನ

ಬೆಳ್ತಂಗಡಿ: ತಾಲೂಕಿನ ಹಿರಿಯ ರಾಜಕೀಯ ಮುಖಂಡ ಉಜಿರೆಯ ತುಂಗಪ್ಪಗೌಡ (78) ಅವರು ಅಲ್ಪಕಾಲದ ಅಸೌಖ್ಯದಿಂದ ಮೇ.10ರಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಬೆಳ್ತಂಗಡಿ ಭೂ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷರಾಗಿ ನಿರ್ದೇಶಕರಾಗಿ ಕಾಲಭೈರವೇಶ್ವರ ಸೊಸೈಟಿಯ ನಿರ್ದೇಶಕರಾಗಿ, ತಾಲೂಕು ಒಕ್ಕಲಿಗ ಗೌಡರ ಸಂಘದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಇವರು ಜನತಾಪಕ್ಷದ ಮೂಲಕ ರಾಜಕೀಯಕ್ಕೆ ಕಾಲಿಟ್ಟು ಸಿದ್ದಾಂತಕ್ಕೆ ಬದ್ದರಾಗಿ ರಾಜಕೀಯ ನಡೆಸಿದ್ದರು.

ಬೆಳ್ತಂಗಡಿಯ ಮಾಜಿ ಶಾಸಕ ದಿ. ಕೆ ವಸಂತ ಬಂಗೇರರು ಜನತಾಪರಿವಾರದ ಪಕ್ಷಗಳಲ್ಲಿ ಇದ್ದಾಗ ಅವರ ಆತ್ಮೀಯ ವಲಯದಲ್ಲಿದ್ದ ತುಂಗಪ್ಪ ಗೌಡರು ಉತ್ತಮ ರಾಜಕೀಯ ಭಾಷಣಕಾರರಾಗಿದ್ದರು. ವಸಂತ ಬಂಗೇರರು ಜನತಾದಳದಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರೂ ಇವರು ಅವರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಬರದೆ ಜನತಾದಳದಲ್ಲಿಯೇ ಮುಂದುವರಿದು ಜನತಾದಳ ಪಕ್ಷದ ಅಸ್ತಿತ್ವ ಉಳಿಸುವ ಪ್ರಯತ್ನ ಮಾಡಿದ್ದರು.

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾಗಿದ್ದ ಇವರು ಕೃಷಿಕರು ಹೌದು. ಮೃತರು ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!