ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ದೇಶದ ರೈತರಿಗೆ ಸಿಹಿಸುದ್ದಿ: ‘ಪಿಎಂ ಕಿಸಾನ್ ನಿಧಿ'ಯ 17 ನೇ ಕಂತಿನ ಬಿಡುಗಡೆಗೆ ಅನುಮೋದನೆ: 20 ಸಾವಿರ ಕೋಟಿ ರೂ ಮೊತ್ತದ ಕಡತಕ್ಕೆ ಪ್ರಧಾನಿ ನರೇಂದ್ರ ಮೋದಿ ಸಹಿ

ದೇಶದ ರೈತರಿಗೆ ಸಿಹಿಸುದ್ದಿ: ‘ಪಿಎಂ ಕಿಸಾನ್ ನಿಧಿ'ಯ 17 ನೇ ಕಂತಿನ ಬಿಡುಗಡೆಗೆ ಅನುಮೋದನೆ: 20 ಸಾವಿರ ಕೋಟಿ ರೂ ಮೊತ್ತದ ಕಡತಕ್ಕೆ ಪ್ರಧಾನಿ ನರೇಂದ್ರ ಮೋದಿ ಸಹಿ

ನವದೆಹಲಿ: ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೆ ನರೇಂದ್ರ ಮೋದಿಯವರು ‘ಪಿಎಂ ಕಿಸಾನ್ ನಿಧಿ'ಯ 17 ನೇ ಕಂತಿನ ಬಿಡುಗಡೆಗೆ ಅನುಮೋದನೆ ನೀಡಿದ್ದಾರೆ.

ಇಂದು ಸುಮಾರು 9.3 ಕೋಟಿ ರೈತರಿಗೆ ಅನುಕೂಲವಾಗಲಿರುವ ಸುಮಾರು 20,000 ಕೋಟಿ ರೂ ಮೊತ್ತದ ಕಡತಕ್ಕೆ ಸಹಿ ಪ್ರಧಾನಿ ಮೋದಿ ಹಾಕಿದ್ದಾರೆ.

ಈ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ ಅವರು, ‘’ನಮ್ಮದು ‘ಕಿಸಾನ್ ಕಲ್ಯಾಣ’ (ರೈತರ ಕಲ್ಯಾಣ)ಕ್ಕೆ ಸಂಪೂರ್ಣ ಬದ್ಧವಾಗಿರುವ ಸರ್ಕಾರ. ಆದ್ದರಿಂದ, ಅಧಿಕಾರ ವಹಿಸಿಕೊಂಡ ಮೇಲೆ ಸಹಿ ಮಾಡಿದ ಮೊದಲ ಕಡತವು ರೈತರಿಗೆ ಸಂಬಂಧಿಸಿದೆ. ಮುಂದಿನ ದಿನಗಳಲ್ಲಿ ನಾವು ರೈತರು ಮತ್ತು ಕೃಷಿ ಕ್ಷೇತ್ರಕ್ಕಾಗಿ ಇನ್ನಷ್ಟು ಮಹತ್ವದ ಕೆಲಸ ಮಾಡಲು ನಿರ್ಧರಿಸಿದ್ದೇವೆ. ಈ ನಿರ್ಧಾರವು ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಚುನಾವಣೆಯ ಗೆಲುವಿನ ನಂತರ ರೈತರ ಕಲ್ಯಾಣಕ್ಕೆ ಸರ್ಕಾರದ ಬದ್ಧತೆಯನ್ನು ಸೂಚಿಸುತ್ತದೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!