ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಉಜಿರೆ: ಹಿಪ್ ಬಾಯ್ಸ್ ಡಾನ್ಸ್ ಕ್ರೀವ್ ಉಜಿರೆ: ಡಾನ್ಸ್ ಬ್ಯಾಟಲ್ – 2024: ನೃತ್ಯ ತರಗತಿಯಲ್ಲಿ ನೃತ್ಯ ಸ್ಪರ್ಧೆ: ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ

ಉಜಿರೆ: ಹಿಪ್ ಬಾಯ್ಸ್ ಡಾನ್ಸ್ ಕ್ರೀವ್ ಉಜಿರೆ: ಡಾನ್ಸ್ ಬ್ಯಾಟಲ್ – 2024: ನೃತ್ಯ ತರಗತಿಯಲ್ಲಿ ನೃತ್ಯ ಸ್ಪರ್ಧೆ: ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ

ಉಜಿರೆ : ಹಿಪ್ ಬಾಯ್ಸ್ ಡಾನ್ಸ್ ಕ್ರೀವ್ ಉಜಿರೆ ಇಲ್ಲಿಯ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಮತ್ತು ಡಾನ್ಸ್ ಸ್ಪರ್ಧೆ - ಡಾನ್ಸ್ ಬ್ಯಾಟಲ್ - 2024 - ಜೂ 2 ರಂದು ಉಜಿರೆ ಹಿಪ್ ಬಾಯ್ಸ್ ನೃತ್ಯ ಸಂಸ್ಥೆಯಲ್ಲಿ ನಡೆಯಿತು.

ಅಮಂತ್ರಣ ಸಂಸ್ಥೆಯ ವಿಜಯ ಕುಮಾರ್ ಜೈನ್ ಅಳದಂಗಡಿ ದೀಪ ಪ್ರಜ್ವಲಿಸಿ ಕಾರ್ಯಕ್ರಮದ ಉದ್ಘಾಟಿಸಿದರು. ಈ ಮೂಲಕ ವರ್ಷದ ನೃತ್ಯ ತರಬೇತಿ ತರಗತಿಗೆ ಚಾಲನೆ ನೀಡಿದರು. ವೇದಿಕೆಯಲ್ಲಿ ಸಂಸ್ಥೆಯ ಮುಖ್ಯಸ್ಥ ಸಹನ್ ಎಂ.ಎಸ್ ಉಜಿರೆ, ತೀರ್ಪುಗಾರರಾದ ಭರತ್, ಸುಮನಾ, ವೈಷ್ಣವಿ, ಚೇತನ್, ಉಪಸ್ಥಿತರಿದ್ದರು.

ಸಮಾರಂಭದಲ್ಲಿ ನೃತ್ಯ ತರಗತಿಯ ಸೀನಿಯರ್ಸ್ ವಿದ್ಯಾರ್ಥಿಗಳಾದ ಚಿಂತನ್ , ಪ್ರಣಂ, ಪ್ರೀತಂ ಸುಶಾಂತ್ ,ಕೀರ್ತನಾ ,ರೇಖಾ, ಪ್ರಾಪ್ತಾ ಹೆಗ್ಡೆ , ದೀಕ್ಷಿತ್ ಅಶ್ವಿತಾ,ಅನುಶ್ರೀ ಅನ್ವಿತಾ,ಹಿಮಾಲಿ, ನಿಖಿತಾ ಹೆಗ್ಡೆ ,ಕವನಶ್ರೀ ಜೈನ್ ಹಾಗೂ ಆಮಂತ್ರಣ ಪರಿವಾರದ ಪ್ರಸಾದ್ ನಾಯಕ್ ಕಾರ್ಕಳ, ಅರುಣ್ ಜೈನ್ ಅಳದಂಗಡಿ, ಪ್ರಕಾಶ್ ಆಚಾರ್ಯ ಮೂಡಬಿದ್ರೆ, ವಿಜಯಚ್ಚಂದ್ರ ಮುಂಡ್ಲಿ ಭಾಗವಹಿಸಿದ್ದರು.

ನೃತ್ಯ ಸ್ಪರ್ಧೆಯ ವಿಜೇತರು

ವಿಶೇಷ ನೃತ್ಯ ಸ್ಪರ್ಧೆಯಲ್ಲಿ: ಧೃತಿ ಟಿ. ಎಸ್ ಉಜಿರೆ - ಪ್ರಥಮ ಮನ್ವಿತಾ ಪ್ರಭು - ದ್ವಿತೀಯ ಬೆಸ್ಟ್ ಎಕ್ಸ್ ಪ್ರೆಷನ್ ಅನ್ವಿತಾ ಉಜಿರೆ ಎನರ್ಜಿಟಿಕ್ ಡಾನ್ಸರ್ ಸಮನ್ವಿ ಉಜಿರೆ, ಸ್ಟೈಲಿಶ್ ಡಾನ್ಸರ್ ಆಪ್ತ ಉಜಿರೆ ಮತ್ತು ಸನ್ಮಿತಾ ಕುಕ್ಕಾವು ಬಹುಮಾನ ಪಡೆದುಕೊಂಡರು.

ಅನ್ವಿತಾ ಸ್ವಾಗತಿಸಿ, ಪ್ರಾಪ್ತಾ ಹೆಗ್ಡೆ ಧನ್ಯವಾದ ಸಲ್ಲಿಸಿದರು. ಹಿಮಾಲಿ ಕಾರ್ಯಕ್ರಮ ನಿರೂಪಿಸಿದರು.

 

https://prajaprakasha.com/?p=23236

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!