ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಸರ್ಕಾರಿ ಬಸ್ಸಿಗೆ ಅಡ್ಡ ಬಂದ ಕಾಡಾನೆ..! ಚಾರ್ಮಾಡಿ ಘಾಟಿಯ ತಿರುವಿನಲ್ಲಿ ಘಟನೆ: ಅರ್ಧ ಗಂಟೆ ರಸ್ತೆ ಬಿಡದ ಒಂಟಿ ಸಲಗ: 2 ಕಿ.ಮೀ ಟ್ರಾಫಿಕ್ ಜಾಮ್..!

ಸರ್ಕಾರಿ ಬಸ್ಸಿಗೆ ಅಡ್ಡ ಬಂದ ಕಾಡಾನೆ..! ಚಾರ್ಮಾಡಿ ಘಾಟಿಯ ತಿರುವಿನಲ್ಲಿ ಘಟನೆ: ಅರ್ಧ ಗಂಟೆ ರಸ್ತೆ ಬಿಡದ ಒಂಟಿ ಸಲಗ: 2 ಕಿ.ಮೀ ಟ್ರಾಫಿಕ್ ಜಾಮ್..!

ಕೊಟ್ಟಿಗೆಹಾರ : ಚಾರ್ಮಾಡಿ ಘಾಟಿಯ ತಿರುವಿನಲ್ಲಿ ಸರ್ಕಾರಿ ಬಸ್ಸಿಗೆ ಕಾಡಾನೆ ಅಡ್ಡ ಬಂದ ಘಟನೆ ಜೂ. 12ರ ರಾತ್ರಿ ಸಂಭವಿಸಿದೆ.

ಚಾರ್ಮಾಡಿ ಘಾಟಿಯ 7 ಮತ್ತು 8ನೇ ತಿರುವಿನಲ್ಲಿ ಕಾಡನೆ ಕಂಡುಬಂದಿದ್ದು ಆನೆಯನ್ನು ಕಂಡ ಬಸ್ ಚಾಲಕ ತಕ್ಷಣ ಬಸ್ ನಿಲ್ಲಿಸಿದ್ದಾರೆ. ಸುಮಾರು ಅರ್ಧ ಗಂಟೆ ಒಂಟಿ ಸಲಗ ರಸ್ತೆಯಲ್ಲೆ ನಿಂತಿದ್ದ ಕಾರಣ ಚಿಕ್ಕಮಗಳೂರು-ಮಂಗಳೂರು ಎರಡೂ ಕಡೆಯಲ್ಲೂ ಎರಡು ಕಿ.ಮೀ. ನಷ್ಟು ಟ್ರಾಫಿಕ್ ಜಾಮ್ ಉಂಟಾಗಿತ್ತು. ಬಳಿಕ ಸರ್ಕಾರಿ ಬಸ್ಸಿನ ಪಕ್ಕದಲ್ಲೇ ಕಾಡಾನೆ ಸಂಚರಿಸಿದ್ದು ಸದ್ಯ ಯಾವುದೇ ತೊಂದರೆ ನೀಡಿಲ್ಲ. ಆದರೆ ಕಾಡಾನೆ ಕಂಡು ಪ್ರಯಾಣಿಕರು ಗಾಬರಿಗೊಂಡಿದ್ದರು.

ಕಳೆದ ಎರಡು ತಿಂಗಳಿಂದ ಚಾರ್ಮಾಡಿಯಲ್ಲೇ ಇರೋ ಕಾಡಾನೆ ರಾತ್ರಿ, ಹಗಲು ಇಲ್ಲೇ ಹೆಚ್ಚಾಗಿ ಸಂಚಾರಿಸುತ್ತಿದ್ದು ಕಾಡಾನೆಯನ್ನ ಸ್ಥಳಾಂತರಿಸುವಂತೆ ಸ್ಥಳಿಯರು ಒತ್ತಾಯಿಸಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!