ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಬಂಟ್ವಾಳ, ಕಾಂಕ್ರೀಟ್ ಅಳವಡಿಕೆ ವೇಳೆ ದುರಂತ,: ಕಟ್ಟಡದಿಂದ ಬಿದ್ದು ಗ್ರಾ.ಪಂ ಸದಸ್ಯ ಸಾವು:

ಬಂಟ್ವಾಳ, ಕಾಂಕ್ರೀಟ್ ಅಳವಡಿಕೆ ವೇಳೆ ದುರಂತ,: ಕಟ್ಟಡದಿಂದ ಬಿದ್ದು ಗ್ರಾ.ಪಂ ಸದಸ್ಯ ಸಾವು:

 

 

ಬಂಟ್ವಾಳ: ಮನೆಯೊಂದರ ಕಾಂಕ್ರೀಟ್‌ ಅಳವಡಿಕೆಗೆ ವೇಳೆ ನಡೆದ ದುರಂತದಲ್ಲಿ ಗ್ರಾಮ ಪಂಚಾಯತ್ ಸದಸ್ಯರೊಬ್ಬರು ಸಾವನ್ನಪ್ಪಿದ ಘಟನೆ ಬಂಟ್ವಾಳದಲ್ಲಿ ಜೂ 05 ರಂದು ನಡೆದಿದೆ. ಮನೆ ನಿರ್ಮಾಣದ ಕಾಂಕ್ರೀಟ್ ಆಳವಡಿಕೆಗಾಗಿ ಹಾಕಿದ್ದ ಹಲಗೆಗಳು ಹಾಗೂ ಜಾಕ್‌ಗಳು ಹಠಾತ್‌ ಮುರಿದು ಬಿದ್ದ ಪರಿಣಾಮ ಈ ದುರ್ಘಟನೆ ನಡೆದಿದೆ. ಮೃತರನ್ನು ಬಂಟ್ವಾಳ ತಾಲೂಕಿನ ಅಮ್ಟಾಡಿಯ ಪಂಚಾಯತ್ ಸದಸ್ಯ ತಡ್ಯಾಲು ನಿವಾಸಿ ಪ್ರಕಾಶ್ (45) ಎಂದು ಗುರುತಿಸಲಾಗಿದೆ. ಬಡಾಜೆ ಎಂಬಲ್ಲಿ ಮನೆಯೊಂದರ ಎರಡನೇ ಮಹಡಿಗೆ ಮೃತರು ಸೇರಿ ಒಟ್ಟು ಮೂರು ಮಂದಿ ಕಾಂಕ್ರೀಟ್ ಕೆಲಸ ಮಾಡುತ್ತಿದ್ದರು. ಆದರೆ ಏಕಾಏಕಿ ಕಾಂಕ್ರೀಟ್ ಅಳವಡಿಕೆಗೆ ಹಾಕಿದ್ದ ಹಲಗೆಗಳು ಮುರಿದು ಬಿದ್ದ ಪರಿಣಾಮ ಮೂವರು ಕೆಳಗೆ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ಪ್ರಕಾಶ್ ಗಂಭೀರವಾಗಿ ಗಾಯಗೊಂಡಿದ್ದರು.ತಕ್ಷಣ ಮೂವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆಯಾದರೂ ಗಂಭೀರವಾಗಿ ಗಾಯಗೊಂಡಿದ್ದ ಪ್ರಕಾಶ್ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಉಳಿದಂತೆ ಇನ್ನಿಬ್ಬರು ಕೆಲಸಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!