ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಬೆಳ್ತಂಗಡಿ ಅಪಘಾತಗಳ ಸರಮಾಲೆ: ಸಂತೆಕಟ್ಟೆ, ಸರಣಿ ಅಪಘಾತ ಟಿ.ಟಿ. ಸೇರಿದಂತೆ ಮೂರು ಕಾರು ಜಖಂ: ಚರ್ಚ್ ರೋಡ್ ಬೈಕಿಗೆ ಕಾರು ಡಿಕ್ಕಿ ಸವಾರನಿಗೆ ಗಾಯ:

ಬೆಳ್ತಂಗಡಿ ಅಪಘಾತಗಳ ಸರಮಾಲೆ: ಸಂತೆಕಟ್ಟೆ, ಸರಣಿ ಅಪಘಾತ ಟಿ.ಟಿ. ಸೇರಿದಂತೆ ಮೂರು ಕಾರು ಜಖಂ: ಚರ್ಚ್ ರೋಡ್ ಬೈಕಿಗೆ ಕಾರು ಡಿಕ್ಕಿ ಸವಾರನಿಗೆ ಗಾಯ:

 

 

ಬೆಳ್ತಂಗಡಿ:ದಿನದಿಂದ ದಿನ ಹೆಚ್ಚಾಗುತ್ತಿರುವ ವಾಹನ ದಟ್ಟಣೆಯಿಂದ ಬೆಳ್ತಂಗಡಿ ಪೇಟೆಯಲ್ಲಿ ಇಂದು ಅಪಘಾತದ ಸರಮಾಲೆ ನಡೆದಿದೆ. ಮಧ್ಯಾಹ್ನ ಹಳೇಕೋಟೆ ಬಳಿ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು ರಾತ್ರಿ ಸಂತೆಕಟ್ಟೆ ಬಳಿ ಸರಣಿ ಅಪಘಾತ ನಡೆದಿದೆ.   ರಸ್ತೆ ಕ್ರಾಸ್ ಮಾಡುವುದಕ್ಕಾಗಿ ಕಾರೊಂದು ನಿಂತ  ವೇಳೆ ಅದರ ಹಿಂಬದಿಯಿಂದ ಬರುತಿದ್ದ ಕಾರನ್ನು ಚಾಲಕ ನಿಲ್ಲಿಸಿದಾಗ ಧರ್ಮಸ್ಥಳ ಕಡೆಯಿಂದ ಬರುತಿದ್ದ ಪ್ರವಾಸಿಗರ ಟೆಂಪೊ ಟ್ರಾವೆಲ್ಲರ್ ವಾಹನವು ವೇಗವಾಗಿ ಬಂದು ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗದಲ್ಲಿದ್ದ ಎರಡು ಕಾರುಗಳು ಒಂದಕ್ಕೊಂದು ಡಿಕ್ಕಿ ಹೊಡೆದುಕೊಂಡು ಸರಣಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಯಾರಿಗೂ ಗಾಯವಾಗಿಲ್ಲ ಎಂದು ತಿಳಿದು ಬಂದಿದೆ. ಸ್ಥಳದಲ್ಲಿದ್ದ ಟ್ರಾಫಿಕ್ ಪೊಲೀಸರು ತಕ್ಷಣ ವಾಹನ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.ಚರ್ಚ್ ಕ್ರಾಸ್ ರೋಡ್ ಬಳಿ ಉಜಿರೆ ಕಡೆಯಿಂದ ಮಂಗಳೂರು ಕಡೆ ಸಂಚರಿಸುತಿದ್ದ ಕಾರೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನ ಕಾಲಿಗೆ ಗಂಭೀರ ಗಾಯಗಳಾಗಿವೆ. ತಕ್ಷಣ ಸ್ಥಳೀಯರು ಗಾಯಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.ಅಪಘಾತಕ್ಕೆ ಕಾರು ಚಾಲಕನ ನಿರ್ಲಕ್ಷ್ಯ ಚಾಲನೆಯೇ ಕಾರಣ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!