ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಕೆಟ್ಟು ನಿಂತ ಮೆಟ್ರೋ: ಡೋರ್ ಓಪನ್ ಆಗದೆ ಪ್ರಯಾಣಿಕರು ಲಾಕ್..!

ಕೆಟ್ಟು ನಿಂತ ಮೆಟ್ರೋ: ಡೋರ್ ಓಪನ್ ಆಗದೆ ಪ್ರಯಾಣಿಕರು ಲಾಕ್..!

ಸಾಂದರ್ಭಿಕ ಚಿತ್ರ

ಬೆಂಗಳೂರು: ಮೆಟ್ರೋ ಬಾಗಿಲು ತೆರೆದುಕೊಳ್ಳದೆ ಪ್ರಯಾಣಿಕರು ಬೋಗಿಯಲ್ಲೇ ಲಾಕ್ ಆದ ಘಟನೆ ಜೂ.13ರಂದು ಸಂಭವಿಸಿದೆ.

ಇಂದು ಬೆಳಗ್ಗೆ 9.58ರ ಸುಮಾರಿಗೆ ಮೆಟ್ರೋ ಹತ್ತಿದ್ದ ಪ್ರಯಾಣಿಕರು ಇನ್ನೇನು ಇಳಿಯಬೇಕು ಎಂದು ಕಾದು ನಿಂತಿದ್ದು ಆದ್ರೆ ಡೋರ್ ಓಪನ್ ಆಗದೆ ಬೋಗಿ ಒಳಗಡೆ ಲಾಕ್ ಆಗಿದ್ದರು.

ಗಂಟೆಗಟ್ಟಲೆ ಕಾದರೂ ಡೋರ್ ಓಪನ್ ಆಗದೆ ಒಳಗಡೆ ಇದ್ದ ಪ್ರಯಾಣಿಕರು ಭಯಗೊಂಡು ಪರದಾಡುವಂತಾಗಿತ್ತು. ಬಳಿಕ ಸಮಸ್ಯೆ ಆಗಿದ್ದ ಮೆಟ್ರೋ ಬೋಗಿಯನ್ನ ಮೆಜೆಸ್ಟಿಕ್‌ನ ಟ್ರ್ಯಾಕ್‍ಗೆ ಶಿಫ್ಟ್ ಮಾಡಿ ಮೆಟ್ರೋ ಇಂಜಿನಿಯರ್‌ಗಳನ್ನ ಕರೆಸಿ ಲಾಕ್ ಆಗಿದ್ದ ಡೋರ್ ಓಪನ್ ಮಾಡಿಸಲಾಯ್ತು. ನಂತರಎಂದಿನಂತೆ ಸಂಚಾರ ಯಥಾಸ್ಥಿತಿಗೆ ಬಂತು. 9.58ಕ್ಕೆ ಕೈಕೊಟ್ಟ ಮೆಟ್ರೋ 11:30 ರ ವೇಳೆಗೆ ಸರಿಯಾಗಿ ಬಾಗಿಲು ತೆರೆದುಕೊಂಡಿದೆ.

ಮೆಟ್ರೋ ಪ್ರಯಾಣಿಕರಿಗೆ ಆದ ಅಡಚಣೆ ಬಗ್ಗೆ ಬಿಎಂಆರ್‌ಸಿಎಲ್ ವಿಷಾಧ ವ್ಯಕ್ತಪಡಿಸಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!