ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಬೆಳ್ತಂಗಡಿ : ದ.ಕ ಬಿಜೆಪಿ ಅಭ್ಯರ್ಥಿಗೆ ಪ್ರಚಂಡ ಬಹುಮತದ ಗೆಲುವು: ಮೂರನೆ ಬಾರಿಗೆ ಪ್ರಧಾನಿಯಾಗಿ ಮೋದಿ ಆಯ್ಕೆ: ಶಾಸಕ ಹರೀಶ್ ಪೂಂಜ ಸಂತಸ

ಬೆಳ್ತಂಗಡಿ : ದ.ಕ ಬಿಜೆಪಿ ಅಭ್ಯರ್ಥಿಗೆ ಪ್ರಚಂಡ ಬಹುಮತದ ಗೆಲುವು: ಮೂರನೆ ಬಾರಿಗೆ ಪ್ರಧಾನಿಯಾಗಿ ಮೋದಿ ಆಯ್ಕೆ: ಶಾಸಕ ಹರೀಶ್ ಪೂಂಜ ಸಂತಸ

ಬೆಳ್ತಂಗಡಿ: ಲೋಕಸಭಾ ಚುನಾವಣೆ2024ರಲ್ಲಿ ನರೇಂದ್ರ ಮೋದಿಜಿಯವರ ನೇತೃತ್ವದ ಎನ್. ಡಿ. ಎ. ಮೈತ್ರಿಕೂಟ ಮೂರನೇ ಬಾರಿಗೆ ಜನಾದೇಶ ಪಡೆದುಕೊಂಡಿದ್ದಕ್ಕೆ ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಪ್ರಚಂಡ ಬಹುಮತದಿಂದ ಜಯಶಾಲಿಗಳಾಗಿರುವುದಕ್ಕೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಸಂತಸ ವ್ಯಕ್ತಪಡಿಸಿದ್ದಾರೆ.

ರಾಜ್ಯ ಕಾಂಗ್ರೆಸ್ ಸರ್ಕಾರ ಆಡಳಿತಯಂತ್ರ ದುರುಪಯೋಗಪಡಿಸಿಕೊಂಡು ಅಪವಾದ ಅಪಪ್ರಚಾರಗಳ ನಡುವೆ ನಡೆಸಿದ ಈ ಚುನಾವಣೆಯಲ್ಲಿ ಕರಾವಳಿಯ ಜನತೆ ಈ ಚುನಾವಣೆಯಲ್ಲಿ ಕಾಂಗ್ರೆಸ್ ನ್ನು ಸರಸಗಟಾಗಿ ತಿರಸ್ಕರಿಸಿ ಹಿಂದುತ್ವದ ಭದ್ರಕೋಟೆಯನ್ನು ಪುಡಿಗಟ್ಟಲು ಅಸಾಧ್ಯವೆಂಬ ಸಂದೇಶವನ್ನು ಸ್ಪಷ್ಟವಾಗಿ ನೀಡಿರುತ್ತಾರೆ.

ಪ್ರಥಮ ಬಾರಿಗೆ ಲೋಕಸಭೆಯನ್ನು ಪ್ರವೇಶಸಲಿರುವ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಅಭಿನಂದನೆಗಳನ್ನು ಸಲ್ಲಿಸಿ ಬೆಳ್ತಂಗಡಿಯಲ್ಲಿ 2019,2023 ಹಾಗೂ 2024 ರ ಸಾರ್ವತ್ರಿಕ ಲೋಕಸಭೆ ಚುನಾವಣೆಯಲ್ಲಿ ಸತತವಾಗಿ ಬಿಜೆಪಿಯ ಮತಗಳಿಕೆಯನ್ನು ಒಂದು ಲಕ್ಷಕ್ಕೂ ಮಿಗಿಲಾಗಿ ನೀಡಿ "ತ್ರೀಸ್ ರೀ ಬಾರ್ ಏಕ್ ಲಾಕ್ ಪಾರ್" ಮಾಡಿದ ಮತದಾರ ಬಾಂಧವರಿಗೆ ಶಾಸಕ ಹರೀಶ್ ಪೂಂಜ ಮನದಾಳದ ಕೃತಜ್ಞತೆಯನ್ನು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!