ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಮಾಜಿ ಗ್ರಾ.ಪಂ ಅಧ್ಯಕ್ಷ ಹಾಗೂ ಹಾಲಿ ಸದಸ್ಯರಾಗಿರುವ ಅಶೋಕ್ ಪೂಜಾರಿ ಮೇಲೆ ಅಕ್ರಮ ಮರಳುಗಾರಿಕೆ ವಿಚಾರದಲ್ಲಿ ಒಂದು ಸಮುದಾಯವನ್ನು ಅವಮಾನಿಸಿ ನಿಂದಿಸಿದ್ದಾರೆ ಎಂದು ಆರೋಪಿಸಿ ಮೇ 06 ರ ರಾತ್ರಿ ತಂಡವೊಂದು ಸೋಮಂತಡ್ಕ ಪೇಟೆಯಲ್ಲಿ ಪ್ರಶ್ನಿಸಿದೆ ಈ ವೇಳೆ ಮಾತಿನ ಚಕಮಕಿ ನಡೆದು ಹಲ್ಲೆ ನಡೆದಿದೆ. ಈ ಸಂದರ್ಭ ಅಶೋಕ್ ಪೂಜಾರಿಯವರ ಅಂಗಿ ಹರಿದಿದ್ದು ಹಲ್ಲೆಯ ವಿಡಿಯೋ ಮತ್ತು ಆಡಿಯೋ ವೈರಲ್ ಅಗಿದ್ದು. ಪ್ರಕರಣದ ಬಗ್ಗೆ ಈವರೆಗೆ ಯಾವುದೇ ದೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.