ಅಶ್ವಥ್ (21) ಎಂಬವರು ನಿನ್ನೆ ಸಂಜೆ ಮಚಾರು ಎಂಬಲ್ಲಿರುವಾಗ ಆರೋಪಿಗಳಾದ ಕರುಣಾಕರ ಗೌಡ, ನಿತಿನ್ ಮತ್ತು ಇನ್ನೊಬ್ಬ ವ್ಯಕ್ತಿ ಬಂದು ಹಲ್ಲೆ ಮಾಡಿದ್ದು ಕರುಣಾಕರ ಗೌಡ ಎಂಬವರು ಜಾತಿ ನಿಂದನೆ ಮಾಡಿದ್ದಾರೆ. ಈ ಬಗ್ಗೆ ಅಶ್ವಥ್ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನನ್ವಯ ಆರೋಪಿಗಳ ವಿರುದ್ಧ ಅಕ್ರ ನಂ 64/2024, ಕಲಂ: 341,323,324,ಜೊತೆಗೆ 34 ಬಾ ದಂ ಸಂ ಮತ್ತು ಕಲಂ 3(1)(S) SC/ST ACT 2015 ರಂತೆ ಪ್ರಕರಣ ದಾಖಲಾಗಿದೆ. ಗಾಯಾಳು ಅಶ್ವಥ್ ಆಸ್ಪತ್ರೆಗೆ ದಾಖಲಾಗಿದ್ದಾರೆ.