ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ರೇಣುಕಾ ಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಫುಲ್ ಸೈಲೆಂಟ್..!: ಖಾಕಿ ವಿಚಾರಣೆಗೆ ಬಳಲಿದ ‘ದಾಸ’ : ಆರೋಪಿಯಾಗಿ ಮರುಗಿದ ‘ಕಾಟೇರ’: ಮುಖದಲ್ಲಿ ಅಡಗಿದ ಗತ್ತು, ಗಾಂಭೀರ್ಯ: ಹೇಗಿದ್ದಾನೆ, ಲಕ್ಷ ಅಭಿಮಾನಿಗಳ ‘ಯಜಮಾನ’..?

ರೇಣುಕಾ ಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಫುಲ್ ಸೈಲೆಂಟ್..!: ಖಾಕಿ ವಿಚಾರಣೆಗೆ ಬಳಲಿದ ‘ದಾಸ’ : ಆರೋಪಿಯಾಗಿ ಮರುಗಿದ ‘ಕಾಟೇರ’: ಮುಖದಲ್ಲಿ ಅಡಗಿದ ಗತ್ತು, ಗಾಂಭೀರ್ಯ: ಹೇಗಿದ್ದಾನೆ, ಲಕ್ಷ ಅಭಿಮಾನಿಗಳ ‘ಯಜಮಾನ’..?

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸ್ಯಾಂಡಲ್ ವುಡ್ ನಟ ದರ್ಶನ್ ಪೊಲೀಸ್ ವಿಚಾರಣೆಯಿಂದ ಬಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ದರ್ಶನ್ ಹಾಗೂ ಗ್ಯಾಂಗ್ ನಡೆಸಿದ ರೇಣುಕಾ ಸ್ವಾಮಿಯ ಭೀಕರ ಹತ್ಯೆಯ ವಿಚಾರಣೆಯನ್ನು ತೀವ್ರಗೊಳಿಸಿರುವ ಪೊಲೀಸರು ಆರೋಪಿ ದರ್ಶನ್ ಮುಂದೆ ಸಾಲು ಸಾಲು ಪ್ರಶ್ನೆಗಳನ್ನಿಡುತ್ತಿದ್ದಾರೆ. ಖಾಕಿ ವಿಚಾರಣೆ ಕಂಡು ದರ್ಶನ್ ಕಂಗಾಲಾಗಿದ್ದಾರೆ. ಅರೆಸ್ಟ್ ಆದ ಮೊದಲ ದಿನ ದರ್ಶನ ಮುಖದಲ್ಲಿದ್ದ ಗತ್ತು, ಗಾಂಭಿರ್ಯ ಈಗ ಇಲ್ಲ.

ದರ್ಶನ್ ಗೆ ಈಗ ಭವಿಷ್ಯದ ಚಿಂತೆ ಕಾಡಿದೆಯಂತೆ. ದಿನಕಳೆದಂತೆ ಅವರು ಸೈಲೆಂಟ್ ಆಗಿದ್ದಾರೆ. ಘಟನೆ ಬಗ್ಗೆ ಗೊತ್ತಿಲ್ಲ ಎಂದು ಪದೇ ಪದೇ ಹೇಳುತ್ತಿರುವ ಹಿನ್ನಲೆ ಇತರೆ ಆರೋಪಿಗಳ ಹೇಳಿಕೆ ಆಧರಿಸಿ ದರ್ಶನ್ ವಿಚಾರಣೆ ಮಾಡಲಾಗುತ್ತಿದೆ. ಸ್ಥಳ ಮಹಜರು ಸಂದರ್ಭದಲ್ಲಿ ಇತರೆ ಆರೋಪಿಗಳ ಹೇಳಿಕೆ ಆಧಾದರ ಮೇಲೆ ದರ್ಶನ್ ಅವರನ್ನು ಪ್ರಶ್ನೆ ಮಾಡಲಾಗಿದೆ. ಅವರು ಪ್ರಕರಣದ ಭಾಗವಾಗಿರುವುದಕ್ಕೆ ಮರುಗುತ್ತಿರುವುದಾಗಿ ತಿಳಿದು ಬಂದಿದೆ.

ದರ್ಶನ್ ಅರೆಸ್ಟ್ ಆದ ಬಳಿಕ ಪ್ರಭಾವ ಬಳಸಿಕೊಂಡು ಹೊರಗೆ ಬರುತ್ತಾರೆ ಎಂದು ಅನೇಕರು ಭಾವಿಸಿದ್ದರು, ಆದರೆ ಅದು ಸುಳ್ಳಾಗಿದೆ, ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿದ್ದಾರೆ. ಇದರಿಂದ ದರ್ಶನ್ ಬಸವಳಿದಿದ್ದಾರೆ ಎಂದು ವರದಿಯಾಗಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!