ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ರೆಖ್ಯಾ, ಕೊಕ್ಕಡದಲ್ಲಿ ಮನೆಗೆ ಬಡಿದ ಸಿಡಿಲು..!ಹಸು, ಸಾಕು ನಾಯಿ ಬಲಿ..!: ವಿದ್ಯುತ್ ಉಪಕರಣಗಳಿಗೆ ಹಾನಿ

ರೆಖ್ಯಾ, ಕೊಕ್ಕಡದಲ್ಲಿ ಮನೆಗೆ ಬಡಿದ ಸಿಡಿಲು..!ಹಸು, ಸಾಕು ನಾಯಿ ಬಲಿ..!: ವಿದ್ಯುತ್ ಉಪಕರಣಗಳಿಗೆ ಹಾನಿ

 

ಬೆಳ್ತಂಗಡಿ: ಭಾರೀ ಸಿಡಿಲಬ್ಬರಕ್ಕೆ ನಾಯಿ ಹಾಗೂ ಹಸು ಮೃತಪಟ್ಟ ಘಟನೆ ರೆಖ್ಯಾ ಗ್ರಾಮದಲ್ಲಿ ಸಂಭವಿಸಿದೆ.

ಜೂ. 02ರಂದು ಸಂಜೆ ತಾಲೂಕಿನಲ್ಲಿ ಮಳೆಯಾಗಿದ್ದು ಈ ಸಂದರ್ಭದಲ್ಲಿ ರೆಖ್ಯಾ ಗ್ರಾಮದ ಸುಂದರ ಗೌಡ ಕುರುಡೇಲು ಎಂಬವರ ಮನೆಗೆ ಸಿಡಿಲು ಬಡಿದು ಮನೆಯ ವಿದ್ಯುತ್ ವೈಯರುಗಳು, ವಿದ್ಯುತ್ ಉಪಕರಣಗಳು ಸುಟ್ಟು ಹೋಗಿವೆ. ಅಲ್ಲದೆ ಹಟ್ಟಿಯಲ್ಲಿದ್ದ ಹಸು ಹಾಗೂ ಮನೆಯ ಅಂಗಳದಲ್ಲಿದ್ದ ನಾಯಿ ಸಿಡಿಲ ಅಬ್ಬರಕ್ಕೆ ಬಲಿಯಾಗಿವೆ.

ಕೊಕ್ಕಡದಲ್ಲಿ ಮನೆಗೆ ಸಿಡಿಲು ಬಡಿತ..! ಕೊಕ್ಕಡದ ಹಳ್ಳಿಂಗೇರಿಯ ನಿತೇಶ್ ರವರ ಮನೆಗೆ ಸಿಡಿಲು ವಿದ್ಯುತ್ ಉಪಕರಣಗಳಾದ ಫ್ಯಾನ್, ಮಿಕ್ಸಿ, ಟಿವಿ, ಸ್ವಿಚ್ ಬೋರ್ಡ್, ಇನ್ನಿತರ ಸಾಮಾಗ್ರಿಗಳು ಸುಟ್ಟು ಹೋಗಿದೆ. ಸಧ್ಯ ಎರಡೂ ಮನೆಯವರು ಪ್ರಾಣಪಾಯದಿಂದ ಪಾರಾಗಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!