ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಪೊಲೀಸರ ಕೈ ಸೇರಿದ ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷಾ ವರದಿ: ಭಯಾನಕವಾಗಿದೆ ಚಿತ್ರಹಿಂಸೆ, ಬರ್ಬರ ಹತ್ಯೆಯ ಗುರುತು..!: ಹೊಟ್ಟೆ, ಕೈ-ಕಾಲು, ಎದೆಯ ಭಾಗದಲ್ಲಿ ರಕ್ತ ಸೋರಿಕೆ..! ಇದಿಷ್ಟೇ ಅಲ್ಲ…..

ಪೊಲೀಸರ ಕೈ ಸೇರಿದ ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷಾ ವರದಿ: ಭಯಾನಕವಾಗಿದೆ ಚಿತ್ರಹಿಂಸೆ, ಬರ್ಬರ ಹತ್ಯೆಯ ಗುರುತು..!: ಹೊಟ್ಟೆ, ಕೈ-ಕಾಲು, ಎದೆಯ ಭಾಗದಲ್ಲಿ ರಕ್ತ ಸೋರಿಕೆ..! ಇದಿಷ್ಟೇ ಅಲ್ಲ…..

ಬೆಂಗಳೂರು: ರೇಣುಕಾಸ್ವಾಮಿ ಬರ್ಬರ ಕೊಲೆಯ ಮರಣೋತ್ತರ ಪರೀಕ್ಷಾ ವರದಿ ಕಾಮಾಕ್ಷಿಪಾಳ್ಯ ಠಾಣೆಯ ಪೊಲೀಸರಿಗೆ ಲಭಿಸಿದ್ದು ಸಂಪೂರ್ಣ ವರದಿ ಭಯಾನಕವಾಗಿದೆ.

ಬೌರಿಂಗ್ ಆಸ್ಪತ್ರೆಯ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿ ವರದಿಯಲ್ಲಿ ರೇಣುಕಾಸ್ವಾಮಿಯ ದೇಹದ ಯಾವ ಭಾಗದಲ್ಲಿ ಗಾಯಗಳಾಗಿತ್ತು ಎಂಬುದನ್ನು ಸ್ಪಷ್ಟವಾಗಿ ತಿಳಿಸಿದ್ದಲ್ಲದೆ, ಆತನನ್ನು ಬರ್ಬರವಾಗಿ ಕೊಲ್ಲಲಾಗಿದೆ ಎಂದು ಹೇಳಿದೆ.

ರೇಣುಕಾಸ್ವಾಮಿ ಮೇಲೆ ಮರದ ಪೀಸ್, ಬೆಲ್ಟ್ ಬಳಸಿ ಹಲ್ಲೆ ಮಾಡಲಾಗಿದ್ದು, ದೇಹದಲ್ಲಿ 15 ಕಡೆ ಗಾಯಗಳಾಗಿವೆ. ಮರ್ಮಾಂಗದ ಮೇಲೆ ಹಲ್ಲೆ ಮಾಡಿರುವುದು ಗೊತ್ತಾಗಿದ್ದು, ಆ ಭಾಗದಲ್ಲಿ ರಕ್ತಸ್ರಾವವಾಗಿದೆ. ಮರ್ಮಾಂಗಕ್ಕೆ ಹೊಡೆದಿರೋದು ಮರಣೋತ್ತರ ಪರೀಕ್ಷೆಯಲ್ಲಿ ಪತ್ತೆಯಾಗಿದೆ.

ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಆದರೆ, ರಕ್ತ ಸೋರಿಕೆಯಾಗಿಲ್ಲ, ಹೊಟ್ಟೆ ಭಾಗದಲ್ಲಿ, ಕೈ ಮತ್ತು ಕಾಲುಗಳಲ್ಲಿ, ಬೆನ್ನು ಹಾಗೂ ಎದೆ ಭಾಗದಲ್ಲಿ ರಕ್ತ ಸೋರಿಕೆಯಾಗಿದೆ. ತೀವ್ರ ಹಲ್ಲೆಯಿಂದ ದೇಹದಲ್ಲಿ ರಕ್ತ ಹೆಪ್ಪುಗಟ್ಟಿ ಸಾವಾಗಿದೆ.

ಮೃತದೇಹದ ಮುಖ ಮತ್ತು ದವಡೆ ಭಾಗವನ್ನು ನಾಯಿಗಳು ಕಿತ್ತು ತಿಂದಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!