ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಕರಾಯ: ಆವರಣ ಗೋಡೆ ಕುಸಿದು ಮನೆಗೆ ಹಾನಿ: ಜಿಲ್ಲಾಧಿಕಾರಿಗೆ ದೂರು ನೀಡಿದರೂ ತೆರವಾಗದ ಕಂಪೌಂಡ್

ಕರಾಯ: ಆವರಣ ಗೋಡೆ ಕುಸಿದು ಮನೆಗೆ ಹಾನಿ: ಜಿಲ್ಲಾಧಿಕಾರಿಗೆ ದೂರು ನೀಡಿದರೂ ತೆರವಾಗದ ಕಂಪೌಂಡ್

ಕರಾಯ: ನೆರೆಮನೆಯ ಆವರಣ ಗೋಡೆ ಕುಸಿದು ಪಕ್ಕದ ಮನೆಗೆ ಹಾನಿಯಾದ ಘಟನೆ ಬೆಳ್ತಂಗಡಿ ತಾಲೂಕಿನ ಕರಾಯದಲ್ಲಿ ನಡೆದಿದೆ.

ಕೃಷ್ಣಪ್ಪ ಎಂಬವರು ತಮ್ಮ ಮನೆಯ ಸುತ್ತ ಸುಮಾರು 20ಫೀಟ್ ಎತ್ತರದಲ್ಲಿ ನಿರ್ಮಿಸಿರುವ ಆವರಣಗೋಡೆ ಕಳೆದು ಒಂದು ವರ್ಷದಿಂದ ಕುಸಿಯುತ್ತಿದ್ದು, ಇದರಿಂದ ಉಮೇಶ್ ಸಾಲ್ಯಾನ್ ಎಂಬವರ ಮನೆಗೆ ಹಾನಿಯಾಗಿದೆ. ಮನೆ ಮುಂಭಾಗದ ಕಂಪೌAಡ್ ಕುಸಿದಿರುವುದರಿಂದ ಉಮೇಶ್ ಕುಟುಂಬಸ್ಥರು ಸಂಕಷ್ಟ ಎದುರಿಸುವಂತಾಗಿದೆ.

ಕೃಷ್ಣಪ್ಪ ಎಂಬವರಿಗೆ ಉಮೇಶ್ ಸಾಲ್ಯಾನ್ ಅವರು ಹಲವಾರು ಬಾರಿ ಈ ಬಗ್ಗೆ ತಿಳಿ ಹೇಳಿದ್ರೂ ಕ್ಯಾರೇ ಅನ್ನದ ಕೃಷ್ಣಪ್ಪ ವಿರುದ್ಧ, 2016 ಮೇ.28ರಂದು ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ಬಳಿಕ ಬೆಳ್ತಂಗಡಿ ತಹಶೀಲ್ದಾರ್ ಕೊಕ್ಕಡ ಕಂದಾಯ ನಿರೀಕ್ಷರಿಗೆ ನೋಟೀಸ್ ನೀಡಿ ಅಪಾಯಕಾರಿ ಗೋಡೆ ತೆರವುಗೊಳಿಸುವಂತೆ ಸೂಚಿಸಿದ್ದಾರೆ. ಆದರೆ ಈವರೆಗೆ ಆವರಣಗೋಡೆ ತೆರವುಗೊಳಿಸಿಲ್ಲ. ಹೀಗಾಗಿ ಇತ್ತೀಚೆಗೆ ಸುರಿದ ಮಳೆಯ ಸಂದರ್ಭ ಇದೇ ಆವರಣಗೋಡೆ ಕುಸಿದು ಉಮೇಶ್ ಸಾಲ್ಯಾನ್ ಮನೆಗೆ ಹೆಚ್ಚಿನ ಹಾನಿಯುಂಟಾಗಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!