ಆಲೂಗೆಡ್ಡೆ ಬೆಳೆ ಸಂರಕ್ಷಣೆಗೆ ಕಾವಲಿಗೆಂದು ಬಸವಣ್ಣ (52) ಇವರು ಜಮೀನಿಗೆ ತೆರಳಿ, ತೆವರಿನ ಮೇಲೆ ಮಲಗಿದ್ದಾಗ ಕಾಡಾನೆ ನುಗ್ಗಿ ಬಂದು ಬಲ ಎದೆಯ ಮೇಲೆ ಕಾಲಿಟ್ಟಿದೆ. ತಕ್ಷಣವೇ ಜೋರಾಗಿ ಕೂಗಿಕೊಂಡಿದ್ದರಿಂದ ತನ್ನ ಮರಿ ಜೊತೆ ಆನೆ ಅಲ್ಲಿಂದ ಕಾಲ್ಕಿತ್ತಿದೆ. ಹೀಗಾಗಿ ರೈತ ಅಪಾಯದಿಂದ ಪಾರಾಗಿದ್ದಾರೆ. ಆದರೆ ಎದೆಗೆ ತೀವ್ರವಾದ ಗಾಯವಾಗಿದೆ.
ಸದ್ಯ ಕಾಮಗೆರೆ ಹೋಲಿ ಕ್ರಾಸ್ ಆಸ್ಪತ್ರೆಯಲ್ಲ ಬಸವಣ್ಣರನ್ನು ದಾಖಲು ಮಾಡಲಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಆಸ್ಪತ್ರೆಗೆ ತೆರಳಿ ಮಾಹಿತಿ ಪಡೆದುಕೊಂಡಿದ್ದಾರೆ.