ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › 15 ದಿನಗಳ ಪುಟ್ಟ ಕಂದಮ್ಮ ಜೀವಂತ ಸಮಾಧಿ..!: ತಂದೆಯಿಂದಲೇ ದುಷ್ಕೃತ್ಯ

15 ದಿನಗಳ ಪುಟ್ಟ ಕಂದಮ್ಮ ಜೀವಂತ ಸಮಾಧಿ..!: ತಂದೆಯಿಂದಲೇ ದುಷ್ಕೃತ್ಯ

ಪಾಕಿಸ್ತಾನ: 15 ದಿನಗಳ ಪುಟ್ಟ ಕಂದಮ್ಮನನ್ನು ತಂದೆಯೇ ಜೀವಂತ ಸಮಾಧಿ ಮಾಡಿರುವ ಅಮಾನವೀಯ ಘಟನೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ತರುಷಾ ಎಂಬಲ್ಲಿ ನಡೆದಿದೆ.

ಮಗುವನ್ನು ಹೂಳುವ ಮೊದಲು ಗೋಣಿಚೀಲದಲ್ಲಿ ಇರಿಸಿ ಜೀವಂತ ಸಮಾಧಿ ಮಾಡಿದ್ದಾನೆ. ಹೆಣ್ಣು ಮಗುವನ್ನು ಈ ರೀತಿಯಾಗಿ ಜೀವಂತ ಸಮಾಧಿ ಮಾಡಲು ಆತ ಕೊಟ್ಟ ಕಾರಣ ಆರ್ಥಿಕ ಸಮಸ್ಯೆ.

ತನ್ನ ಪುಟ್ಟ ಮಗಳಿಗೆ ಚಿಕಿತ್ಸೆ ಕೊಡಿಸಲು ಸಾಧ್ಯವಿಲ್ಲ ಎಂದು ಮಗುವನ್ನು ಜೀವಂತವಾಗಿ ಸಮಾಧಿ ಮಾಡಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನಂತೆ.

ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ನ್ಯಾಯಾಲಯದ ಆದೇಶದ ನಂತರ ಪೊಲೀಸರು ಮಗುವನ್ನು ಸಮಾಧಿಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!